ಮಡಿಕೇರಿ, ಮಾ. 16 : ಕೊಡಗು ವಿದ್ಯಾಲಯ ಭಾರತೀಯ ವಿದ್ಯಾಭವನ ಶಾಲೆಯಲ್ಲಿ ಇಂದು ಜಿಲ್ಲೆಯ ಪುಟ್ಟ ಬಾಲಕಿಯರ ಪ್ರಥಮ ಕ್ರಿಕೆಟ್ ಕೋಚಿಂಗ್ ಉದ್ಘಾಟನೆ ನಡೆಯಿತು.ಉಪ ಪ್ರಾಂಶುಪಾಲೆ ವನಿತಾ ನಂಜಪ್ಪ ಚೆಂಡು ಎಸೆಯುವದರ ಮೂಲಕ ಉದ್ಘಾಟಿಸಿದರು.ವಿದ್ಯಾಲಯದ ಸ್ಪೋಟ್ರ್ಸ್ ಛೇರ್‍ಮನ್ ರಘು ಮಾದಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ ಕ್ರಿಕೆಟ್ ಆಡ ಬಲ್ಲ ಸಾಕಷ್ಟು ಹೆಣ್ಣು ಮಕ್ಕಳಿದ್ದು, ಸೂಕ್ತ ತರಬೇತಿಯೊಂದಿಗೆ ಅವರನ್ನು ಹುರಿದುಂಬಿಸಲಾಗುವದೆಂದು ಹೇಳಿದರು.

(ಮೊದಲ ಪುಟದಿಂದ) ತರುಣರ ತಂಡದಲ್ಲಿ ಜಿಲ್ಲೆಯಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ತಂಡದಲ್ಲಿ ಆಡುವವರಿದ್ದು, ತರುಣಿಯರ ತಂಡದಲ್ಲು ಸಾಕಷ್ಟು ಅವಕಾಶ ಇದೆ ಎಂದರು.ಪ್ರಾಂಶುಪಾಲ ಸೀನಿವಾಸನ್ ‘ಶಕ್ತಿ’ಯ ಬಿ.ಜಿ. ಅನಂತ ಶಯನ, ದೈಹಿಕ ಶಿಕ್ಷಕರುಗಳಾದ ಕ್ಯಾ|| ದಾಮೋದರ್, ಶ್ವೇತ, ವಿದ್ಯಾಲದಯದ ರವಿ, ತರಬೇತುದಾರರಾದ ಹರೀಶ್ ಮತ್ತು ನಂದ ಹಾಜರಿದ್ದರು.