ಸೋಮವಾರಪೇಟೆ, ಮಾ. 17: ತಾಲೂಕಿನ ಯಲಕನೂರು ಗ್ರಾಮದಲ್ಲಿ ಬೈಕ್ ಸವಾರರ ಮೇಲೆ ಒಂಟಿ ಕಾಡಾನೆಯೊಂದು ಧಾಳಿ ನಡೆಸಿದ್ದು, ಅದೃಷ್ಟವಶಾತ್ ಸವಾರರು ಪ್ರಾಣಾಪಾಯದಿಂದ ಬದುಕಿ ಬಂದ ಘಟನೆ ನಿನ್ನೆ ರಾತ್ರಿ ನಡೆದಿದೆ.ಅರೆಯೂರು ಗ್ರಾಮದ ನಾಣಯ್ಯ ಅವರ ಪುತ್ರ ಎಂ.ಎನ್. ಕಿರಣ್ ಮತ್ತು ಅದೇ ಗ್ರಾಮದ ಕುಮಾರ್ ಅವರುಗಳು ನಿನ್ನೆ ಸಂಜೆ ಕುಶಾಲನಗರಕ್ಕೆ ತೆರಳಿ ರಾತ್ರಿ 9.30ರ ಸುಮಾರಿಗೆ ಅರೆಯೂರು ಗ್ರಾಮಕ್ಕೆ ಆಗಮಿಸುವ ಸಂದರ್ಭ ಯಲಕನೂರು ಗ್ರಾಮದ ಮುಖ್ಯರಸ್ತೆಯಲ್ಲಿ ಕಾಡಾನೆ ಧಾಳಿ ನಡೆಸಿದೆ.ಬೈಕ್ ಚಾಲಿಸುತ್ತಿದ್ದ ಕಿರಣ್ ಮತ್ತು ಹಿಂಬದಿ ಸವಾರ ಕುಮಾರ್ ಸೋಮವಾರಪೇಟೆ, ಮಾ. 17: ತಾಲೂಕಿನ ಯಲಕನೂರು ಗ್ರಾಮದಲ್ಲಿ ಬೈಕ್ ಸವಾರರ ಮೇಲೆ ಒಂಟಿ ಕಾಡಾನೆಯೊಂದು ಧಾಳಿ ನಡೆಸಿದ್ದು, ಅದೃಷ್ಟವಶಾತ್ ಸವಾರರು ಪ್ರಾಣಾಪಾಯದಿಂದ ಬದುಕಿ ಬಂದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಅರೆಯೂರು ಗ್ರಾಮದ ನಾಣಯ್ಯ ಅವರ ಪುತ್ರ ಎಂ.ಎನ್. ಕಿರಣ್ ಮತ್ತು ಅದೇ ಗ್ರಾಮದ ಕುಮಾರ್ ಅವರುಗಳು ನಿನ್ನೆ ಸಂಜೆ ಕುಶಾಲನಗರಕ್ಕೆ ತೆರಳಿ ರಾತ್ರಿ 9.30ರ ಸುಮಾರಿಗೆ ಅರೆಯೂರು ಗ್ರಾಮಕ್ಕೆ ಆಗಮಿಸುವ ಸಂದರ್ಭ ಯಲಕನೂರು ಗ್ರಾಮದ ಮುಖ್ಯರಸ್ತೆಯಲ್ಲಿ ಕಾಡಾನೆ ಧಾಳಿ ನಡೆಸಿದೆ.
ಬೈಕ್ ಚಾಲಿಸುತ್ತಿದ್ದ ಕಿರಣ್ ಮತ್ತು ಹಿಂಬದಿ ಸವಾರ ಕುಮಾರ್ ತಕ್ಷಣ ಎದುರು ಭಾಗವಿದ್ದ ಮರವನ್ನು ಏರಿದ ಕಿರಣ್‍ನನ್ನು ಕಂಡ ಕಾಡಾನೆ, ಮರದ ಬುಡವನ್ನು ಗುದ್ದಿ ಬೀಳಿಸಲು ಪ್ರಯತ್ನಿಸಿದೆ. ಸೊಂಡಲಿನಿಂದ ಮಣ್ಣನ್ನು ತೆಗೆದು ಮರಕ್ಕೆ ಎರಚಿ ತನ್ನ ಆಕ್ರೋಶ ವ್ಯಕ್ತಪಡಿಸಿದೆ. ಇತ್ತ ಹಿಂಬದಿ ಸವಾರರಾಗಿದ್ದ
(ಮೊದಲ ಪುಟದಿಂದ) ಕುಮಾರ್ ಅವರು ಸನಿಹವೇ ಇದ್ದ ಭೋಜ ಅವರ ಮನೆಗೆ ತೆರಳಿ ವಿಷಯ ತಿಳಿಸಿದ್ದು, ತಕ್ಷಣ ಪಟಾಕಿ ಸಿಡಿಸಿದ್ದಾರೆ. ಪಟಾಕಿಯ ಶಬ್ದಕ್ಕೆ ನಾಲ್ಕೈದು ಬಾರಿ ಜೋರಾಗಿ ಘೀಳಿಟ್ಟ ಒಂಟಿ ಆನೆ ನಂತರ ಅರಣ್ಯದೊಳಗೆ ಓಡಿ ಹೋಗಿದೆ.
ಆನೆಯಿಂದ ಪಾರಾಗಲು ಜೀವಭಯದಿಂದ ಓಡಿದ ಕಿರಣ್‍ನ ಮುಖ, ಹಣೆ, ಕಾಲಿನ ಭಾಗಕ್ಕೆ ಗಾಯಗಳಾಗಿವೆ. ತಕ್ಷಣ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ, ಗಾಯಾಳುಗಳನ್ನು ರಾತ್ರಿಯೇ ಸೋಮವಾರಪೇಟೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಇತ್ತ ಬೈಕ್‍ನ ಮೇಲೆ ತನ್ನ ಆಕ್ರೋಶವನ್ನು ತೀರಿಸಿಕೊಂಡಿರುವ ಸಲಗ, ಮನಸೋಯಿಚ್ಛೆ ತುಳಿದು ಬೈಕ್‍ನ್ನು ಸಂಪೂರ್ಣ ಜಖಂಗೊಳಿಸಿದೆ.
ತಕ್ಷಣ ಈ ಭಾಗದಲ್ಲಿ ಸಂಚರಿಸುತ್ತಿರುವ ಆನೆಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಿನ್ನೆಯಷ್ಟೇ ತೆಗೆಯಲಾಗಿದ್ದ ಬೋರ್‍ವೆಲ್‍ಗೆ ಪೈಪ್ ಮತ್ತು ಮೋಟಾರ್ ಖರೀದಿಸಲೆಂದು ಕುಶಾಲನಗರಕ್ಕೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭ ಎದುರಿಗೆ ಕಾಡಾನೆ ಬಂದು ಧಾಳಿ ನಡೆಸಿದೆ. ಅದೃಷ್ಟದಿಂದ ಬದುಕಿದ್ದೇವೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿರಣ್ ಮತ್ತು ಕುಮಾರ್ ಅವರುಗಳು ತಿಳಿಸಿದ್ದಾರೆ.