ನಾಪೆÇೀಕ್ಲು, ಮಾ. 17 : ನಾಪೆÉÇೀಕ್ಲು ಗ್ರಾಮ ಪಂಚಾಯಿತಿ ದುರಾಡಳಿತಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ನಗರದ ಪೆಟ್ರೋಲ್ ಬಂಕ್‍ನಿಂದ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಘೋಷಣೆ ಕೂಗುತ್ತಾ ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಸಾಗಿದ ಬಿ.ಜೆ.ಪಿ.ಯ ಪ್ರತಿಭಟನಾಕಾರರು ಬಹಿರಂಗ ಸಭೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ
(ಮೊದಲ ಪುಟದಿಂದ) ಸದಸ್ಯರಿಗಾಗಲಿ ಯಾವದೇ ಅಧಿಕಾರವಿಲ್ಲ ಎಂದು ಟೀಕಿಸಿದರು.
ರಾಜ್ಯ ಬಿ.ಜೆ.ಪಿ. ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ಈ ರೀತಿಯ ದುರಾಡಳಿತವನ್ನು ನಾಪೆÉÇೀಕ್ಲು ಗ್ರಾಮ ಪಂಚಾಯಿತಿಯಲ್ಲಿ ನಾನು ಎಂದೂ ನೋಡಲಿಲ್ಲ; ಇದು ಗುಂಡಾಗಿರಿಯನ್ನು ಪ್ರವೃತ್ತಿಯನ್ನು ತೋರಿಸುತ್ತದೆ ಎಂದರು.
ಸಭೆಯಲ್ಲಿ ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಬಿ.ಜೆ.ಪಿ. ವಲಯ ಮಾಜೀ ಅಧ್ಯಕ್ಷ ಕುಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೋಳಿಯಾಡಿರ ಸಂತು ಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಕೋಡಿಯಂಡ ಇಂದಿರಾಹರೀಶ್, ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್, ಸುಶೀ¯ಮ್ಮ , ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕೇಟೋಳಿರ ಹರೀಶ್ ಪೂವಯ್ಯ, ಎಂ.ಎಂ. ನರೇಂದ್ರ, ಪಾಡಿಯಮ್ಮಂಡ ಮನು ಮಹೇಶ್, ಬದ್ದಂಜೆಟ್ಟೀರ ದೇವಿದೇವಯ್ಯ, ಕೇಲೇಟಿರ ದೀಪು ದೇವಯ್ಯ, ಕಂಗಾಂಡ ಜಾಲಿ ಪೂವಪ್ಪ, ಮಾಳೆಯಂಡ ಅಯ್ಯಪ್ಪ, ಗ್ರಾಮ ಪಂಚಾಯಿತಿಯು ವಾಣಿಜ್ಯ ಮಳಿಗೆ ಕಟ್ಟಲು ಅನುಮತಿ ನೀಡಲಿಲ್ಲ ಎಂಬ ಕಾರಣದಿಂದ ಬಿಜೆಪಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿರುವದು ರಾಜಕೀಯ ಪ್ರೇರಿತವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಲೇಟಿರ ದೀಪು ದೇವಯ್ಯ ಎಂಬವರು ತಮ್ಮ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಗ್ರಾಮ ಪಂಚಾಯಿತಿಗೆ ಅನುಮತಿ ಕೋರಿ ಯಾವದೇ ಅರ್ಜಿ ಸಲ್ಲಿಸಲಿಲ್ಲ. ಹಾಗಿರುವಾಗ ನಾವು ಅನುಮತಿ ನೀಡಿಲ್ಲ ಎಂಬದು ಎಷ್ಟು ಸರಿ? ಈ ಬಗ್ಗೆ ಪ್ರತಿಭಟನಾಕಾರರು ಮೊದಲು ತಿಳಿಯಬೇಕು ಎಂದರು. ಅನುಮತಿ ಪಡೆಯದೆ ಕಟ್ಟಡ ನಿರ್ಮಿಸುವದು ಕಾನೂನು ಬಾಹಿರವಾಗಿದೆ. ಇಂತಹ ಕಟ್ಟಡಗಳು ನಿರ್ಮಾಣವಾಗುತ್ತಿರುವದು ಗಮನಕ್ಕೆ ಬಂದಲ್ಲಿ ಇದರ ತಡೆಗೆ ಪಂಚಾಯಿತಿಯಿಂದ ನೋಟೀಸು ನೀಡಲಾಗುವದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸದ ಮನೆ, ಲೈನ್ ಮನೆ ನಿರ್ಮಾಣಕ್ಕೆ ಇದುವರೆಗೂ ಯಾರಿಗೂ ತಡೆ ನೀಡಿಲ್ಲ. ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಕಾನೂನು ಬದ್ಧವಾಗಿ ಅನುಮತಿ ಪಡೆಯಬೇಕಾಗಿರುವದರಿಂದ ಇದಕ್ಕೆ ತಡೆ ನೀಡಲಾಗಿದೆ ಎಂದರು. ಬಿಜೆಪಿ ಅವರ ಯಾವದೇ ಆರೋಪದಲ್ಲಿ ಹುರುಳಿಲ್ಲ. ನಾವು ದಬ್ಬಾಳಿಕೆ, ಗುಂಡಾಗಿರಿ ಮಾಡಿ ಪಂಚಾಯಿತಿ ಆಡಳಿತ ನಡೆಸಬೇಕಿಲ್ಲ ಎಂದ ಅವರು ಕೇಲೇಟಿರ ದೇವಯ್ಯ ಅವರು ಕಟ್ಟಡ ನಿರ್ಮಾಣ ವಿಷಯದಲ್ಲಿ ಗೊಂದಲ ಸೃಷ್ಟಿಸಿಕೊಂಡಿದ್ದಾರೆ. ಅವರ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆÉ. ಈ ಬಗ್ಗೆ ತನ್ನ ಮತ್ತು ಸದಸ್ಯ ಖುರೇಷಿ ಅವರ ಹಸ್ತಕ್ಷೇಪವಿರುವದು ಸಾಬೀತಾದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವದಾಗಿ ಹೇಳಿದರು.
ಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಸದಸ್ಯರಾದ ಮಹಮ್ಮದ್ ಖುರೇಶಿ, ಮಾಚೇಟಿರ ಕುಸು ಕುಶಾಲಪ್ಪ, ಚೋಕಿರ ರೋಷನ್, ಟಿ.ಎ. ಮಹಮ್ಮದ್, ಪಿ.ಎಂ. ರಷೀದ್ ಇದ್ದರು. - ಪ್ರಭಾಕರ್