ಮಡಿಕೇರಿ, ಮಾ. 16: ಇಂದು ನಗರಕ್ಕೆ ಆಗಮಿಸುವದರೊಂದಿಗೆ ಬಿಜೆಪಿಯ ನವಶಕ್ತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಮನ್ಸೂಫ್ ಎಲ್. ಮಾಂಡವ್ಯ ಅವರು, ಈ ರಾತ್ರಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ತುರ್ತು ಕರೆಯ ಮೇರೆಗೆ ಇಲ್ಲಿಂದ ನಿರ್ಗಮಿಸಿದರು. ನವದೆಹಲಿಯಲ್ಲಿ ಜರುಗಲಿರುವ ಬಿಜೆಪಿ ಉನ್ನತಮಟ್ಟದ ಸಭೆಗಾಗಿ ಹಿಂತೆರಳಿದರೆಂದು ಮೂಲಗಳು ತಿಳಿಸಿವೆ.

ಅಲ್ಲದೆ ತಾ. 17 ರಂದು (ಇಂದು) ಗೋಣಿಕೊಪ್ಪಲು, ಪಿರಿಯಾಪಟ್ಟಣ, ಹುಣಸೂರುವಿನಲ್ಲಿ ಪ್ರತ್ಯೇಕ ಜರುಗಲಿರುವ ಬಿಜೆಪಿ ಜನಶಕ್ತಿ ಕಾರ್ಯಾಗಾರದಲ್ಲಿ ಇನ್ನೋರ್ವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಭಾಗವಹಿಸಲಿದ್ದಾರೆ ಎಂದು ಈ ಮೂಲಗಳಿಂದ ಗೊತ್ತಾಗಿದೆ. ಸಚಿವ ಮಾಂಡವ್ಯ ಕೊಡಗಿನಿಂದ ನಿರ್ಗಮಿಸುವ ಮುನ್ನ ತಲಕಾವೇರಿ - ಭಾಗಮಂಡಲ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದು, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹಾಗೂ ಇತರರು ಹಾಜರಿದ್ದರು.