ಮಡಿಕೇರಿ, ಮಾ. 16: 2018-19ನೇ ಸಾಲಿನ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 12 (1)(ಬಿ) ಮತ್ತು 12(1) ಸಿ ಪ್ರಕಾರ ಶೇ.25ರ ಮೀಸಲಾತಿ ಕೋಟಾದಡಿಯಲ್ಲಿ ನಡೆಸುವ ದಾಖಲಾತಿ ಪ್ರಕ್ರಿಯೆ ಕುರಿತಂತೆ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12(1)(ಬಿ) ಮತ್ತು 12(1) (ಸಿ) ಪ್ರಕಾರ ಶೇ. 25 ರ ಮೀಸಲಾತಿ ಕೋಟಾದಡಿಯಲ್ಲಿ ತಾಲ್ಲೂಕಿನ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಮಾರ್ಚ್ 21 ರ ವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆನ್‍ಲೈನ್ ಪೋರ್ಟಲ್ ಮೂಲಕ ಅರ್ಜಿ ಸ್ವೀಕರಿಸಲಾಗುವುದು.
ಜಿಲ್ಲೆಯಲ್ಲಿ ಒಟ್ಟು 88 ಶಾಲೆಗಳಲ್ಲಿ 859 ಸೀಟುಗಳು ದಾಖಲಾತಿಗೆ ಲಭ್ಯವಿದ್ದು, ಪ್ರಸ್ತುತ ಸಾಲಿನಲ್ಲಿ ಎಲ್‍ಕೆಜಿ ಹಾಗೂ 1 ನೇ ತರಗತಿ ಪ್ರವೇಶಕ್ಕೆ ಅರ್ಜಿಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಗುವಿನ ಹಾಗೂ ಒಬ್ಬ ಪೋಷಕಕರ (ತಂದೆ ಅಥವಾ ತಾಯಿ) ಆಧಾರ್ ಸಂಖ್ಯೆ ಹೆಸರು, ಜನ್ಮ ದಿನಾಂಕ, ಲಿಂಗ ಮತ್ತು ವಿಳಾಸದ ಮಾಹಿತಿಯನ್ನು ಆಧಾರ್ ಕಾರ್ಡಿನಲ್ಲಿ ನಮೂದಿಸಿರುವಂತೆ ಆನ್‍ಲೈನ್ ಅರ್ಜಿ ಸಲ್ಲಿಸುವ ಸಮಯದಲ್ಲಿ ಒದಗಿಸುವದು. ಆಧಾರ್ ಕಾರ್ಡಿನಲ್ಲಿ ನಮೂದಿಸಿರುವ ವಿಳಾಸದ ಆಧಾರದ ಮೇಲೆ ನೆರೆಹೊರೆಯ ಖಾಸಗಿ ಅನುದಾನರಹಿತ ಶಾಲೆಗಳನ್ನು ಪ್ರವೇಶಕ್ಕೆ ಪರಿಗಣಿಸಲಾಗುವದು. ಮಗುವಿನ ಆಧಾರ್ ನೊಂದಣೆ ಸಮಯದಲ್ಲಿ ಮಾಡಿಸಿರದಿದ್ದರೆ ಆಧಾರ್ ನೊಂದಣಿ ಕೇಂದ್ರಗಳನ್ನು ಸಂಪರ್ಕಿಸಿ ಕೂಡಲೇ ನೋಂದಣಿ ಮಾಡಿಸಿಕೊಳ್ಳುವದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ಮಗುವಿನ ಭಾವಚಿತ್ರ, ಮಗುವಿನ ಜನನ ಪ್ರಮಾಣ ಪತ್ರ, ಮಗುವಿನ ಆಧಾರ್ ಕಾರ್ಡ್, ಪೋಷಕರ ಆಧಾರ್ ಕಾರ್ಡ್, ಹಿಂದುಳಿದ ವರ್ಗಗಳಾಗಿದ್ದಲ್ಲಿ ಜಾತಿ ಮತ್ತು ಆದಾಯದ ಪ್ರಮಾಣಪತ್ರ, ಪರಿಶಿಷ್ಟಜಾತಿ ಪರಿಶಿಷ್ಟವರ್ಗ ಮತ್ತು ಪ್ರವರ್ಗ-1 ಆಗಿದ್ದಲ್ಲಿ ಜಾತಿ ಧೃಡೀಕರಣ ಪತ್ರ, ಅರ್ಜಿಸಲ್ಲಿಸಲು ವಯೋಮಿತಿ 01-06-2018ಕ್ಕೆ ಇರುವಂತೆ. ಎಲ್ ಕೆ.ಜಿ ತರಗತಿಗೆ 3ವರ್ಷ 10 ತಿಂಗಳಿಂದ 4 ವರ್ಷ 10ತಿಂಗಳು. 1ನೇ ತರಗತಿಗೆ 5ವರ್ಷ 10ತಿಂಗಳಿಂದ 6ವರ್ಷ 10ತಿಂಗಳು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಹಾಯವಾಣಿಯನ್ನು ಸಂಪರ್ಕಿಸಿ 9900457040, 9945742445, 9611509815, 08272-228337 ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ ಅವರು ತಿಳಿಸಿದ್ದಾರೆ.