ನಾಪೆÇೀಕ್ಲು, ಮಾ. 15: ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಚಮಂಡ ಲವ ಚಿಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಾಪೆÇೀಕ್ಲು ಹೋಬಳಿ ಕಂದಾಯ ಪರಿವೀಕ್ಷಕ ಜೆ.ಡಿ.ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಾಚಮಂಡ ಲವ ಚಿಣ್ಣಪ್ಪ ಅವರ ಹೆಸರನ್ನು ಕಲಿಯಂಡ ಸಂಪ ಅಯ್ಯಪ್ಪ ಸೂಚಿಸಿದರು. ಬೊಳ್ಳಂಡ ಶರಿ ಗಿರೀಶ್ ಮತ್ತಿತರರು ಅನುಮೋದಿಸಿದರು.
ಕಂದಾಯ ಪರಿವೀಕ್ಷಕರಿಂದ ಅಧಿಕಾರ ವಹಿಸಿ ಮಾತನಾಡಿದ ಲವ ಚಿಣ್ಣಪ್ಪ ದೇವಳದ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡಲಾಗುವದು. ಭಕ್ತರ ಅನುಕೂಲಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವದು. ದೇವಾಲಯಕ್ಕೆ ಬರುವ ಎಲ್ಲಾ ಆದಾಯ ಮೂಲಗಳನ್ನು ಸಮರ್ಪಕ ವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸೇವಾ ಕೌಂಟರ್‍ಗಳನ್ನು ತೆರೆಯುವದರ ಮೂಲಕ ಸಂಪನ್ಮೂಲಗಳ ಸೋರಿಕೆಯನ್ನು ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.
ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಅವರೊಂದಿಗೆ ನಿರ್ದೇಶಕರಾಗಿ ಬೊಳ್ಳಂಡ ಶರಿ ಗಿರೀಶ್, ಕಲಿಯಂಡ ಸಂಪ ಅಯ್ಯಪ್ಪ, ಕೇಟೋಳಿರ ಧರಣಿ ಸೋಮಣ್ಣ, ಮಾರ್ಚಂಡ ಪ್ರವೀಣ್, ಕೇಟೋಳಿರ ಶಾರದ, ಕುಡಿಯರ ಪೆÇನ್ನಪ್ಪ, ಮುಖ್ಯ ಅರ್ಚಕ ಕುಶ ಭಟ್ ಅವರನ್ನು ಸರಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಲವ ಚಿಣ್ಣಪ್ಪ ಈ ಹಿಂದೆ ಕುಂಜಿಲ - ಕಕ್ಕಬ್ಬೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ, ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಭಕ್ತಜನ ಸಂಘದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.