ವೀರಾಜಪೇಟೆ, ಮಾ. 15: ಕುಟ್ಟ ಬಳಿ ಕೆ.ಬಾಡಗ ಗ್ರಾಮದ ಸಿ.ಬಿ. ಸುಬ್ಬಯ್ಯನಿಗೆ ಅದೇ ಗ್ರಾಮದ ಸಿ.ಬಿ. ಕಾರ್ಯಪ್ಪ ಎಂಬವರು ಗುದ್ದಲಿ ಯಿಂದ ಮಾರಣಾಂತಿಕ ಹಲ್ಲೆ ಮಾಡಿದ ಆರೋಪದ ಮೇರೆ ಇಲ್ಲಿನ ಅಪರ ಹಾಗೂ ಎರಡನೇ ಸೆಷನ್ಸ್ ನ್ಯಾಯಾಧೀಶರಾದ ಮೋಹನ್ ಪ್ರಭು ಆರೋಪಿ ಕಾರ್ಯಪ್ಪನಿಗೆ ಒಂದು ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ತಾ. 11.6.2016ರಂದು ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಸುಬ್ಬಯ್ಯ ಕಾಫಿ ತೋಟದಲ್ಲಿ ಕಾರ್ಮಿಕರೊಂದಿ ಗಿದ್ದಾಗ ಅಲ್ಲಿಗೆ ಬಂದ ಕಾರ್ಯಪ್ಪ ಪಕ್ಕದಲ್ಲಿದ್ದ ಗುದ್ದಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದನೆಂದು ಕುಟ್ಟ ಪೊಲೀಸರು ಐ.ಪಿ.ಸಿ 307ರ ಪ್ರಕಾರ ಪ್ರಕರಣ ದಾಖಲಿಸಿದ್ದರು. ಸರಕಾರದ ಪರ ಅಭಿಯೋಜಕ ನಾರಾಯಣ್ ವಾದಿಸಿದರು.