ಮಡಿಕೇರಿ, ಮಾ.15 : ಯುಗಾದಿ ಹೊಸ ವರ್ಷಾಚರಣೆಯ ಪ್ರಯುಕ್ತ ವೀರಾಜಪೇಟೆ ಜೀವನ ಜ್ಯೋತಿ ಟ್ರಸ್ಟ್ ವತಿಯಿಂದ ತಾ. 18 ರಂದು ಬೃಹತ್ ವಾಹನ ಜಾಥಾ ಹಾಗೂ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಸ್ವಚ್ಛತಾ ಜನಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ನ ಅಧ್ಯಕ್ಷ ಎಂ.ಎನ್.ಅಜಯ್ ರಾವ್ ತಾ. 18 ರಂದು ಬೆಳಗ್ಗೆ 10 ಗಂಟೆಗೆ ಭಾರತೀಯ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ “ನಾವು ಭಾರತೀಯರು” ಎಂಬ ಸಂಕಲ್ಪದೊಂದಿಗೆ ರಸ್ತೆ ಸುರಕ್ಷತಾ ಸಪ್ತಾಹ, ಸ್ಪಚ್ಛತಾ ಅಭಿಯಾನ, ಅರಣ್ಯ ಸಂರಕ್ಷಣೆ ಹಾಗೂ ಕಾಡ್ಗಿಚ್ಚು ನಿವಾರಣೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ವೀರಾಜಪೇಟೆಯ ತೆಲುಗರ ಬೀದಿಯ ಮಾರಿಯಮ್ಮ ದೇವಸ್ಥಾನದಿಂದ ಜಾಥಾ ಹೊರಟು ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಲಿದೆ. ನಂತರ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಹೊಸ ವರ್ಷಾಚರಣೆಯ ಪ್ರಯುಕ್ತ ಟ್ರಸ್ಟ್ ವತಿಯಿಂದ ಬೆಳಕು ಚೆಲ್ಲುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಉತ್ತಮ ಸಮಾಜ ನಿರ್ಮಾಣ ನಮ್ಮ ಗುರಿ ಎಂದರು. ಹೆಚ್ಚಿನ ಮಾಹಿತಿಗಾಗಿ 9482864116, 9480645697, 9686403101 ಸಂಪರ್ಕಿಸ ಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಖಜಾಂಚಿ ಟಿ.ಡಿ.ವಾಸು, ಕಾರ್ಯದರ್ಶಿ ಬಿ.ಎಸ್. ಸೋಮಪ್ಪ ಕರಡ ಹಾಗೂ ಉಪಕಾರ್ಯದರ್ಶಿ ವಿ.ಕೆ.ಯುವರಾಜ್ ಕೃಷ್ಣನ್ ಉಪಸ್ಥಿತರಿದ್ದರು.