ನಾಪೆÇೀಕ್ಲು, ಮಾ. 15: ಮೈಸೂರಿನ ವಿಜಯನಗರದಲ್ಲಿ ತಾ/ 15ರ ಅಪರಾಹ್ನ ಸುಮಾರು ಒಂದು ಗಂಟೆ ಸಮಯಕ್ಕೆ ನಡೆದ ರಸ್ತೆ ಅಪಘಾತದಲ್ಲಿ ಜಿಲ್ಲೆಯ ನಾಪೆÇೀಕ್ಲುವಿನ ಮಣವಟ್ಟಿರ ಸಾಹಿಲ್ ಸೋಮಯ್ಯ (18) ಸಾವನ್ನಪ್ಪಿದ್ದಾನೆ.ಮಣವಟ್ಟಿರ ಮಹೇಶ್ ಅವರ ಪುತ್ರ ಮೃತ ಸಾಹಿಲ್ ಸೋಮಯ್ಯ ಆತನ ಸ್ನೇಹಿತನಾದ ಶಿವಚಾಳಿಯಂಡ (ಮೊದಲ ಪುಟದಿಂದ) ಮಹೇಶ್ ಅವರ ಪುತ್ರ ರಿಜು, ದೊಡ್ಡಪುಲಿಕೋಟು ಗ್ರಾಮದ ಕರವಂಡ ಲವ ನಾಣಯ್ಯ ಅವರ ಪುತ್ರ ಕೌಶಿಕ್ ಪೂಣಚ್ಚ ಮತ್ತು ಮಡಿಕೇರಿಯಲ್ಲಿ ವಾಸವಿರುವ ಬೊಟ್ಟೋಳಂಡ ಮಂದಣ್ಣ ಅವರ ಪುತ್ರ ಗಗನ್ ಸೇಕ್ರೆಂಟ್ ಕೌಟಿಲ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಧ್ಯಾಹ್ನ ಊಟಕ್ಕಾಗಿ ಮಣವಟ್ಟಿರ ಸೋಮಯ್ಯ ಅವರ ತಂದೆ ಮಹೇಶ್ ಅವರಿಗೆ ಸೇರಿದ ಕೆಎ-12-ಎನ್-1326 ಐಕಾನ್ ಕಾರ್‍ನಲ್ಲಿ ಪಿ.ಜಿ.ಗೆ ಆಗಮಿಸುತ್ತಿದ್ದ ವೇಳೆಯಲ್ಲಿ ಕಾರು ಅಪಘಾತಕ್ಕೊಳಗಾಗಿದೆ. ಸೋಮಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇತರರು ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಮೈಸೂರಿನ ಬೃಂದಾವನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕರವಂಡ ಲವ ನಾಣಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.