ಶ್ರೀಮಂಗಲ, ಮಾ. 15: ಸಾಲ ಭಾದೆಯಿಂದ ರೈತರೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪಿಯ ಬಾಡಗರಕೇರಿ ಗ್ರಾಮದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾಗಿರುವ ರೈತ ಅಣ್ಣೀರ ಪೌತಿ ರಾಜು ಮೊಣ್ಣಪ್ಪ ಅವರ ಪುತ್ರ ಹರೀಶ್ (46) ಆತ್ಮಹತ್ಯೆಗೆ ಶರಣಾದ ರೈತ. ಇಂದು ಮಧ್ಯಾಹ್ನ 1.20 ಕ್ಕೆ ಊಟ ಮಾಡಿ, ಮನೆಯ ಮುಂದಿನ ಕಾಫಿ ತೋಟದಲ್ಲಿ ತನ್ನ ಒಂಟಿ ನಳಿಕೆ ಕೋವಿಯಿಂದ ಕೊರಳಿನ ಭಾಗಕ್ಕೆ ಗುಂಡು ಹಾರಿಸಿಕೊಂಡು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. (ಮೊದಲ ಪುಟದಿಂದ) ಮನೆಯಲ್ಲಿ ಪತ್ನಿ, ತಾಯಿ, ಪಕ್ಕದ ಮನೆಗೆ ತೆರಳಿದ್ದ ಸಂದರ್ಭ ಈ ಕೃತ್ಯ ಮಾಡಿಕೊಂಡಿದ್ದು, ಸಾವಿಗೆ ಸಾಲಬಾದೆ ಕಾರಣವಾಗಿದೆ. ಬಿರುನಾಣಿ ಶಾಖೆಯ ಕೆನರಾ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಲ್ಲದೆ ಹಲವು ಶಾಖೆಗಳಲ್ಲಿ ಪಿಗ್ಮಿ ಸಾಲ ಅಲ್ಲದೇ ಇತರ ಆಭರಣ, ಕೈ ಸಾಲ ಮಾಡಿದ್ದರು.

ಈ ಬಗ್ಗೆ ಹರೀಶ್ ಚಿಂತಿತರಾಗಿದ್ದರು. ಈ ಬಗ್ಗೆ ಅವರ ಪತ್ನಿ ದೇವಮ್ಮ ಪೊಲೀಸರಿಗೆ ಹೇಳಿಕೆ ನೀಡಿದ್ದು, ಪೊಲೀಸರು ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಶ್ರೀಮಂಗಲ ಠಾಣಾಧಿಕಾರಿ ಹೆಚ್.ಸಿ. ಸಣ್ಣಯ್ಯ ಮಹಜರು ನಡೆಸಿದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.