ಸೋಮವಾರಪೇಟೆ, ಮಾ. 16: ಕಳೆದ ಅನೇಕ ವರ್ಷಗಳಿಂದ ಬತ್ತಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಪಟ್ಟಣದ ಆನೆಕೆರೆಯ ಹೂಳೆತ್ತುವ ಕಾರ್ಯಕ್ಕೆ ತಾ. 17 ರಂದು ಚಾಲನೆ ನೀಡಲಾಗುವದು ಎಂದು ಮೋಟಾರ್ ಯೂನಿಯನ್ ಅಧ್ಯಕ್ಷ ಸಿ.ಸಿ. ನಂದ ತಿಳಿಸಿದ್ದಾರೆ.
ಆನೆಕೆರೆಯ ಪುನರುಜ್ಜೀವಕ್ಕಾಗಿ ಅಂದು ಬೆಳಿಗ್ಗೆ 9 ಗಂಟೆಗೆ ಉದ್ಯಮಿ ಹಾಗೂ ದಾನಿಯಾಗಿರುವ ಹರಪಳ್ಳಿ ರವೀಂದ್ರ ಅವರ ನೆರವಿನೊಂದಿಗೆ ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರ್ ಕೆಲಸಗಾರರ ಸಂಘ ಹಾಗೂ ನಗರ ಗೌಡ ಒಕ್ಕೂಟದ ಆಶ್ರಯದಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುವದು ಎಂದು ಅವರು ತಿಳಿಸಿದ್ದಾರೆ.