ಸೋಮವಾರಪೇಟೆ, ಮಾ. 15: ಇಲ್ಲಿಗೆ ಸಮೀಪದ ಕೋವರ್‍ಕೊಲ್ಲಿ ಟಾಟಾ ಕಾಫಿ ಸಂಸ್ಥೆಯ ಶ್ರೀ ವನದುರ್ಗಾದೇವಿ ದೇವಾಲಯದಲ್ಲಿ ತಾ. 23 ರಂದು 44ನೇ ವರ್ಷದ ವಾರ್ಷಿಕ ಮಹಾ ಪೂಜೋತ್ಸವ ನಡೆಯಲಿದೆ.
ವಾರ್ಷಿಕೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, 7ಕ್ಕೆ ಪೂರ್ಣಾಹುತಿ, 9.30ಕ್ಕೆ ದುರ್ಗಾಹೋಮ, ಮಧ್ಯಾಹ್ನ 12ಕ್ಕೆ ಮಹಾಪೂಜೆ ನಡೆಯಲಿದೆ. ಸಂಜೆ 5 ಗಂಟೆಗೆ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ.