ಸುಂಟಿಕೊಪ್ಪ, ಮಾ. 14: ಕೊಡಗರಹಳ್ಳಿ ವ್ಯಾಪ್ತಿಯ ಕೂರ್ಗಳ್ಳಿ ರಸ್ತೆ ತಿರುವಿನಲ್ಲಿ ಗೂಡ್ಸ್ ಆಟೋ, ಕಾರು ಹಾಗೂ ಬಸ್ ನಡುವೆ ಬುಧವಾರ ಸಂಜೆ ಸರಣಿ ಅಪಘಾತ ಸಂಭವಿಸಿದ್ದು, ಗೂಡ್ಸ್ ಆಟೋ ಚಾಲಕನ ಕಾಲು ಮುರಿತಗೊಂಡಿದೆಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ (ಕೆ.ಎ. 19ಎಫ್ 2988) ಕುಶಾಲನಗರದಿಂದ ಮಡಿಕೇರಿ ಕಡೆಗೆ ಆಗಮಿಸುತ್ತಿದ್ದ ಆಶೋಕ್ ಲೈಲ್ಯಾಂಡ್ ಗೂಡ್ಸ್ ಆಟೋ (ಕೆಎ 09 ಬಿ 9492) ಹಾಗೂ ಮಡಿಕೇರಿ ಕಡೆಗೆ ಆಗಮಿಸುತ್ತಿದ್ದ (ಕೆಎ 12 ಎಂ -1412) ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಗೂಡ್ಸ್ ಆಟೋ ಕಾರನ್ನು ಹಿಂದಿಕ್ಕುವ ಸಂದರ್ಭ ಎದುರುಗಡೆಯಿಂದ ಆಗಮಿಸುತ್ತಿದ್ದ ಬಸ್ಸಿಗೆ ಆಟೋಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಗೊಂಡು ಹಿಂದೆ ಚಲಿಸಿತ್ತು ಎನ್ನಲಾಗಿದೆ. ಇದರಿಂದ ಹಿಂಬದಿ ಯಿಂದ ಆಗಮಿಸುತ್ತಿದ್ದ ಕಾರಿಗೆ ಡಿಕ್ಕಿಗೊಂಡಿದೆ ಈ ಅಪಘಾತದಲ್ಲಿ ಆಟೋಚಾಲಕ ಆನಂದ ಎಂಬವರ ಬಲ ಕಾಲು ಮುರಿತಗೊಂಡಿದೆ. ಕಾರಿನ ಮತ್ತು ಬಸ್ಸಿನ ಚಾಲಕ ಮತ್ತು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಗಾಯಾಳು ಚಾಲಕ ಪಿರಿಯಾಪಟ್ಟಣ ನಿವಾಸಿಯಾಗಿದ್ದು, ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಈ ಅಪಘಾತದಿಂದ ಕೆಲ ಗಂಟೆಗಳ ಕಾಲ

(ಮೊದಲ ಪುಟದಿಂದ) ಹೆದ್ದಾರಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್ ಹಾಗೂ ಸಿಬ್ಬಂದಿ ತೆರಳಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇನ್ನೊಂದು ಅವಘಡ

ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಪ್ರತ್ಯೇಕ ಎರಡು ಅಪಘಾತಗಳು ಸಂಭವಿಸಿ ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ.

ಕಾರೊಂದು ಮಾರುತಿ ಓಮ್ನಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಮೀಪದ ಗದ್ದೆಹಳ್ಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮಂಗಳೂರಿನಿಂದ ಕುಶಾಲನಗರ ದತ್ತ ಬರುತ್ತಿದ್ದ ಸ್ಕೋಡಾ ಕಾರು ಗದ್ದೆಹಳ್ಳ ಸರ್ಕಲ್‍ನ ಹೊಸ ಹೋಟೆಲ್ ಮುಂಭಾಗದಲ್ಲಿ ಮಂಡ್ಯ ದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಮಾರುತಿ ಓಮ್ನಿಗೆ ಅಪ್ಪಳಿಸಿದೆ.ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮಡಿಕೇರಿ ಕಡೆಗೆ ಬರುತ್ತಿದ್ದ ಮಾರುತಿ ಓಮ್ನಿ ಸುಂಟಿಕೊಪ್ಪ ಕಡೆಗೆ ತಿರುಗಿ ನಿಂತಿದೆ. ಮಾರುತಿ ಓಮ್ನಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಎರಡು ವಾಹನಗಳಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಚಿತ್ರ, ವರದಿ: ಟಿ.ಜಿ. ಸತೀಶ್, ರಾಜುರೈ