ಮಡಿಕೇರಿ, ಮಾ. 9: ವಿಶ್ವ ಮಹಿಳಾ ದಿನದ ಅಂಗವಾಗಿ ಮೂರ್ನಾಡುವಿನ ಮಹಿಳಾ ಮಂಡಳದ ವತಿಯಿಂದ ತಾ. 10 ರಂದು (ಇಂದು) ಮಹಿಳೆಯರಿಗೆ ಅಡುಗೆ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಹಿಳಾ ಮಂಡಳದ ಅಧ್ಯಕ್ಷೆ ಬಡುವಂಡ ಸೀತಮ್ಮ ತಿಳಿಸಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಇಬ್ಬರು ಮಹಿಳೆಯರು ಒಂದು ಗುಂಪಾಗಿ ಭಾಗವಹಿಸಬಹುದಾಗಿದೆ. ವಿಜೇತ ತಂಡಕ್ಕೆ ಆಕರ್ಷಕ ಬಹುಮಾನ ನೀಡಲಾಗುವದು. ಅಡುಗೆ ಮಾಡಲು ಬೇಕಾಗುವ ಎಲ್ಲಾ ಪದಾರ್ಥಗಳು, ಗ್ಯಾಸ್ಸ್ಟೌವ್ ಹಾಗೂ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾಗವಹಿಸುವವರು ಮಹಿಳಾ ಮಂಡಳದ ಕಚೇರಿ ಸಮಯದಲ್ಲಿ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ.