ಮಡಿಕೇರಿ, ಮಾ. 8: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು, ಜಿಲ್ಲಾಮಟ್ಟದ ಮಹಿಳಾ ಸಮ್ಮಿಲನ ವ್ಯವಸ್ಥಾಪನಾ ಸಮಿತಿ ಸುಳ್ಯ ಮತ್ತು ಜನಜಾಗೃತಿ ವೇದಿಕೆ, ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಮಹಿಳಾ ಸಮ್ಮಿಲನವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮರಗೋಡು ‘ಎ’ ಮತ್ತು ‘ಬಿ’ ಒಕ್ಕೂಟದಲ್ಲಿ ಅತ್ಯುತ್ತಮ ಕಾರ್ಯಗಳನ್ನು ಕೈಗೊಂಡು ಉತ್ತಮ ಸಾಧನೆ ತೋರಿದ್ದಕ್ಕಾಗಿ ತಾಲೂಕು ಮಟ್ಟದ ಅತ್ಯುತ್ತಮ ಮಹಿಳಾ ಸೇವಾ ಪ್ರತಿನಿಧಿ ಪ್ರಶಸ್ತಿಯನ್ನು ಮರಗೋಡು ಗ್ರಾಮದ ಬಿ.ಎಸ್. ಲತಾ ಅವರಿಗೆ ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ನೀಡಿ ಸನ್ಮಾನಿಸಿದರು.