ಗೋಣಿಕೊಪ್ಪಲು, ಮಾ. 7: ಗೋಣಿಕೊಪ್ಪಲು ಸಾರ್ವಜನಿಕ ಶೌಚಾಲಯದ ವಿವಾದ ಟೆಂಡರ್ ಪ್ರಕ್ರಿಯೆಯೊಂದಿಗೆ ಅಂತ್ಯ ಗೊಂಡಂತಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಇಂದು ಒಟ್ಟು ಮೂವರು ಬಿಡ್ಡುದಾರರು ಪಾಲ್ಗೊಂಡಿದ್ದು, ರೂ. 2 ಲಕ್ಷಕ್ಕೆ ಅಯ್ಯಪ್ಪ ಎಂಬವರು ಹೊಂದಿ ಕೊಂಡಿದ್ದಾರೆ.

ಇತ್ತೀಚೆಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಸುಮಾರು ರೂ. 5 ಲಕ್ಷ ವೆಚ್ಚದ ಸಾರ್ವಜನಿಕ ಶೌಚಾಲಯವನ್ನೂ ಉದ್ಘಾಟಿಸಿದ್ದು, ನಂತರ ಬೀಗ ಮುದ್ರೆ ಹಾಕುವ ದರೊಂದಿಗೆ ವಿವಾದಕ್ಕೆ ಕಾರಣವಾಗಿತ್ತು. ತಾ. 8 ರಿಂದ (ಇಂದು) ನೂತನ ಸಾರ್ವಜನಿಕ ಶೌಚಾಲಯ ತೆರೆಯಲ್ಪಡುತ್ತಿದ್ದು, ಬಸ್ ನಿಲ್ದಾಣದಲ್ಲಿರುವ ತಾತ್ಕಾಲಿಕ ಶೌಚಾಲಯ ತೆರವುಗೊಳಿಸಲಾಗುವದು ಹಾಗೂ ನೂತನ ಶೌಚಾಲಯದ ಸುತ್ತಮುತ್ತಲು ತರಕಾರಿ ವ್ಯಾಪಾರ ನಿಷೇಧಿಸಲಾಗಿದೆ ಎಂದು ಪಿಡಿಓ ಚಂದ್ರಮೌಳಿ ತಿಳಿಸಿದ್ದಾರೆ.

- ಟಿ.ಎಲ್.ಎಸ್.