ಮಡಿಕೇರಿ, ಮಾ. 7: ಮಡಿಕೇರಿಯ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಇತ್ತೀಚೆಗೆ ರಾಜ್ಯಮಟ್ಟದ ಕಾಮರ್ಸ್ ಮತ್ತು ಮ್ಯಾನೇಜ್‍ಮೆಂಟ್ ಫೆಸ್ಟ್ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಜರುಗಿತು. ನಾಲ್ಕು ವರ್ಷಗಳ ಬಳಿಕ ಜರುಗಿದ ಈ ಕಾರ್ಯಕ್ರಮದಲ್ಲಿ ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳ 17 ತಂಡಗಳು ಭಾಗಿಯಾಗುವ ಮೂಲಕ ಅರ್ಥಪೂರ್ಣವಾಗಿ ಜರುಗಿತು. ಎಫ್.ಎಂ.ಸಿ. ಕಾಲೇಜಿನ ಕಾಮರ್ಸ್ ಮತ್ತು ಮ್ಯಾನೇಜ್‍ಮೆಂಟ್ ವಿಭಾಗ ಇದನ್ನು ಈ ವಿಭಾಗದ ಮುಖ್ಯಸ್ಥೆ, ಕಾರ್ಯಕ್ರಮದ ಸಂಯೋಜಕರಾದ ಡಾ. ಗಾಯತ್ರಿದೇವಿ ಅವರ ಮುಂದಾಳತ್ವದಲ್ಲಿ ಆಯೋಜನೆ ಮಾಡಿತ್ತು. ವಾಣಿಜ್ಯ ವಿಚಾರಕ್ಕೆ ಸಂಬಂಧಿಸಿದ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಂಗಳೂರು, ಪುತ್ತೂರು, ಮೈಸೂರು, ಸುಳ್ಯ, ಶನಿವಾರಸಂತೆ, ಗೋಣಿಕೊಪ್ಪ, ವೀರಾಜಪೇಟೆ, ನಾಪೋಕ್ಲು, ಮಡಿಕೇರಿ ಸೇರಿದಂತೆ ಒಟ್ಟು 17 ಕಾಲೇಜುಗಳ ತಂಡಗಳು ಭಾಗಿಯಾಗಿದ್ದವು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಡಿಕೇರಿಯ ಸರಕಾರಿ ಪದವಿ ಕಾಲೇಜಿನ ಸಹಾಯಕ ಪ್ರೊಫೆಸರ್ ಡಾ. ನಿರ್ಮಲಾ ಕೆ.ಡಿ. ಅವರು ವಿದ್ಯಾರ್ಥಿಗಳು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರ ಬಾರದು. ಇಂತಹ ಸ್ಪರ್ಧಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳ ಅನಾವರಣಕ್ಕೆ ಸಹಕಾರಿಯಾಗುತ್ತದೆ. ಪ್ರತಿಭೆ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆ ಎಂದರು.

ವಾಣಿಜ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕುರುಕ್ಷೇತ್ರ (ಐಸ್‍ಬ್ರೇಕರ್), ಏಕಾಗ್ರತ (ಟ್ರಜರ್ ಹಂಟ್) ಚಕ್ರವ್ಯೂಹ (ಬೆಸ್ಟ್ ಮ್ಯಾನೇಜರ್), ಧರ್ಮ (ಮಾನವ ಸಂಪನ್ಮೂಲ), ಆವಿಷ್ಕಾರ್ (ಮಾರ್ಕೆಟಿಂಗ್), ಚಾಣಕ್ಯ (ಫೈನಾನ್ಸ್) ವಿವಿಧ ಸ್ಪರ್ಧೆಗಳು ಜರುಗಿದವು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರಿನ ವಿದ್ಯಾವಿಕಾಸ್ ಪದವಿ ಕಾಲೇಜಿನ ಸಹಾಯಕ ಪ್ರೊಫೆಸರ್ ಡಾ. ಪ್ರಿಯಾ ಸಿ.ಜೆ. ಅವರು ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರ, ಜರುಗಿತು. ವಿದ್ಯಾರ್ಥಿ ಸಂಯೋಜಕರಾಗಿ ಹರ್ಷಿತ್ ಪರಪ್ಪು ಹಾಗೂ ಆಜ್ಜೇಟಿರ ವಿಲ್ಮ ಪಳಂಗಪ್ಪ ಪಾಲ್ಗೊಂಡಿದ್ದರು.

ವಿಜೇತರು

ಐಸ್‍ಬ್ರೇಕರ್ ಸ್ಪರ್ಧೆ: ಪ್ರಥಮ- ಸಂತ ಅನ್ನಮ್ಮ ಕಾಲೇಜು ವೀರಾಜಪೇಟೆ.

ಟ್ರಜರ್ ಹಂಟ್: ಮಹಿಳಾ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ.

ಮಾನವ ಸಂಪನ್ಮೂಲ : ಪ್ರಥಮ -ಸೆಂಟ್ ಫಿಲೋಮಿನಾಸ್ ಮೈಸೂರು., ದ್ವಿತೀಯ: ಸೆಂಟ್ ಫಿಲೋಮಿನಾಸ್ ಪುತ್ತೂರು.

ಫೈನಾನ್ಸ್ : ಪ್ರಥಮ- ಎಂ.ಜಿ.ಎಂ. ಕುಶಾಲನಗರ, ದ್ವಿತೀಯ ಸಂತ ಅನ್ನಮ್ಮ ವೀರಾಜಪೇಟೆ.

ಮಾರ್ಕೆಟಿಂಗ್: ಪ್ರಥಮ- ಕಾವೇರಿ ಕಾಲೇಜು, ವೀರಾಜಪೇಟೆ, ದ್ವಿತೀಯ- ಸೆಂಟ್ ಫಿಲೋಮಿನಾ ಪುತ್ತೂರು.

ಬೆಸ್ಟ್ ಮ್ಯಾನೇಜರ್ : ಕಾವೇರಿ ಕಾಲೇಜು, ಗೋಣಿಕೊಪ್ಪಲು.

ಸಮಗ್ರ ಪ್ರಶಸ್ತಿ: ವಿಜೇತರು: ಸಂತ ಅನ್ನಮ್ಮ ವೀರಾಜಪೇಟೆ. ರನ್ನರ್ಸ್: ಕಾವೇರಿ ಕಾಲೇಜು ಗೋಣಿಕೊಪ್ಪಲು.