*ಗೋಣಿಕೊಪ್ಪಲು, ಮಾ. 7 : 85 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಹುದೂರು ಹಳ್ಳಿಗಟ್ಟು ಗ್ರಾಮದ ರಸ್ತೆಗಳಿಗೆ ಶಾಸಕ ಬೋಪಯ್ಯ ಚಾಲನೆ ನೀಡಿದರು.
ಶಾಸಕರ ವಿಶೇಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಡೆದಿದೆ. ಸೀತಾ ಕಾಲೋನಿಯ ರಸ್ತೆಗೆ 60 ಲಕ್ಷ, ಹುದೂರು ರಸ್ತೆಗೆ 20 ಲಕ್ಷ ಹಾಗೂ ಅಲ್ಪಸಂಖ್ಯಾತ ಯೋಜನೆಯಡಿ 5 ಲಕ್ಷ ವೆಚ್ಚದಲ್ಲಿ ಚಿಮ್ಮಚ್ಚೀರ ಕುಟುಂಬಸ್ಥರ ಮನೆಗೆ ಹೋಗುವ ರಸ್ತೆ ನಿರ್ಮಾಣಗೊಂಡಿದೆ.
ಈ ಸಂದರ್ಭ ಅರುವತ್ತೊಕ್ಲು ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ ಸೋಮಯ್ಯ, ಬಿ.ಜೆ.ಪಿ. ಹಿಂದುಳಿದ ವರ್ಗದ ಅಧ್ಯಕ್ಷ ಚಂದ್ರಶೇಖರ್, ಫೆಡರೇಷನ್ ಉಪಾಧ್ಯಕ್ಷ ಮಧು ದೇವಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಭೂಮಿ ಪೂಜೆ
ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 68 ಲಕ್ಷದ ಕಾಂಕ್ರೀಟ್ ಹಾಗೂ ಡಾಂಬರೀಕರಣ ರಸ್ತೆಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಮಲ್ಲೂರು ಮಹಲಿಂಗ ದೇವಸ್ಥಾನಕ್ಕೆ 5 ಲಕ್ಷ, ನಿಟ್ಟೂರು ಜಾಗಲೆ ರಸ್ತೆ 5 ಲಕ್ಷ, ನಿಟ್ಟೂರು ಮಾಚೀಮಾಡ ರಸ್ತೆ 5 ಲಕ್ಷ, ಕೊಟ್ಟಗೇರಿ ಮಾಚಂಗಡ ಚೇಂಬಾರೆ ರಸ್ತೆ 5 ಲಕ್ಷ, ಕೊಲ್ಲಿ ಹಾಡಿಗೆ 5 ಲಕ್ಷ, ದಾಳಿಂಬೆ, ಕಾರ್ಮಾಡು 5 ಲಕ್ಷ, ಕಾರ್ಮಾಡು ಮುಕ್ಕಾಟೀರ ಕುಟುಂಬಸ್ಥರ ರಸ್ತೆಗೆ 3 ಲಕ್ಷ, ಬೆಂಡಗುತ್ತಿ ಹರಿಜನ ಕಾಲೋನಿಗೆ 5 ಲಕ್ಷ, ಕೊಟ್ಟಗೇರಿ ಹರಿಜನ ರಸ್ತೆ 15 ಲಕ್ಷ ಅನುಧಾನದಲ್ಲಿ ಕಾಮಗಾರಿಗಳು ನಡೆಯಲಿದೆ ಎಂದು ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದರು.
ಈ ಸಂದರ್ಭ ನಿಟ್ಟೂರು ಗ್ರಾ. ಪಂ. ಅಧ್ಯಕ್ಷೆ ಅನಿತಾ, ಸದಸ್ಯ ಚಕ್ಕೇರ ಸೂರ್ಯ ಅಯ್ಯಪ್ಪ, ಆರ್.ಎಂ.ಸಿ. ಸದಸ್ಯ ಸುಜಾ ಪೂಣಚ್ಚ, ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಅರಮಣಮಾಡ ರಂಜನ್, ಕೃಷಿಪತ್ತಿನ ಸಹಕಾರ ಸಂಘಗಳ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಎ.ಪಿ.ಎಂ.ಎಸ್. ಸದಸ್ಯ ಕಾಯಮಾಡ ರಾಜ, ಸ್ಥಾನೀಯ ಸಮಿತಿ ಅದ್ಯಕ್ಷ, ಹೋಬಳಿ ಅಧ್ಯಕ್ಷ ಎಂ. ಮಾಚಂಗಡ ಉಮೇಶ್, , ಕಾರ್ಯದರ್ಶಿ ಸೋಮಯ್ಯ, ಫೆಡರೇಶನ್ ಸದಸ್ಯ ಮಲ್ಲಂಡ ಮಧು ದೇವಯ್ಯ ಅಳಮೇಂಗಡ ರವಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಹಕ್ಕು ಪತ್ರ ನೀಡಲು ಒತ್ತಾಯ
ಹುದೂರು ಗ್ರಾಮದಲ್ಲಿ ವಾಸವಾಗಿರುವ ಕಾಡುಕುರುಬ ನಿವಾಸಿಗಳಿಗೆ ಹಕ್ಕುಪತ್ರ ಒದಗಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಮಹದೇವ ಸ್ವಾಮಿ ಅವರಿಗೆ ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು.
ಡಾಂಬರೀಕರಣ ರಸ್ತೆಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಇಲ್ಲಿನ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿದ ಅವರು ಸ್ಥಳಕ್ಕೆ ತಹಶೀಲ್ದಾರ್ ಬರುವಂತೆ ತಿಳಿಸಿ ಜನರ ಸಮಸ್ಯೆಯಾದ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಸುಮಾರು 48 ಕಾಡು ಕುರುಬ ಕುಟುಂಬಗಳು ವಾಸವಿರುವ ಹುದೂರು ಗ್ರಾಮದಲ್ಲಿ ಅವರ ಜಾತಿ ದೃಢೀಕರಣ ಪತ್ರದಲ್ಲಿ ಕೊಡಗು ಕುರುಬ ಎಂದು ನೋಂದಣಿಯಾಗುತ್ತಿದೆ. ಇದರಿಂದ ಇವರಿಗೆ ಸಿಗಬೇಕಾದ ಕೇಂದ್ರ ಸರ್ಕಾರದ ಸವಲತ್ತುಗಳು ದೊರಕುತ್ತಿಲ್ಲ. ಇವರನ್ನು ಕಾಡು ಕುರುಬ ಎಂದು ನಮೂದಿಸಿ ಸರ್ಕಾರದ ಎಲ್ಲಾ ಯೋಜನೆಗಳು ಸಿಗುವಂತೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭ ತಹಶೀಲ್ದಾರ್ ಮಹಾದೇವ ಸ್ವಾಮಿ, ಪೆÇನ್ನಂಪೇಟೆ ಕಂದಾಯ ಪರಿವೀಕ್ಷಕ ರಾಧಕೃಷ್ಣ, ಅರುವತ್ತೊಕ್ಲು ಗ್ರಾ.ಪಂ. ಅಧ್ಯಕ್ಷ ಸುಗುಣ ಸೋಮಯ್ಯ, ಬಿ.ಜೆ.ಪಿ. ಹಿಂದುಳಿದ ವರ್ಗದ ಅಧ್ಯಕ್ಷ ಚಂದ್ರಶೇಖರ್ ಹಾಗೂ ಗ್ರಾಮಸ್ಥರು, ಫಲಾನುಭವಿಗಳು ಹಾಜರಿದ್ದರು.