ಮಡಿಕೇರಿ, ಮಾ. 7: ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಕೋಡಿರ. ಎಂ. ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಅವಿನಾಶ್ ವಿ. ಅವರು ‘ವಸಾಹತುಷಾಹಿ ಕೊಡಗಿನಲ್ಲಿ ಕಮಿಷನರ್ಗಳ ಆಡಳಿತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗಳು (ಕ್ರಿ.ಶ. 1834 ರಿಂದ 1947)’ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನೆಗಾಗಿ ವಿಶ್ವವಿದ್ಯಾನಿಲಯವು ಅವಿನಾಶ್ಗೆ ಡಾಕ್ಟರೇಟ್ ಪದವಿ (ಪಿ.ಹೆಚ್ಡಿ) ಪ್ರದಾನ ಮಾಡಿದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಅವಿನಾಶ್ ಮಡಿಕೇರಿಯ ಲಕ್ಷ್ಮೀ-ಶ್ರೀನಿವಾಸ್ ದಂಪತಿಯ ಪುತ್ರ.