ಕೂಡಿಗೆ, ಮಾ. 7: ತೊರೆನೂರು ಗ್ರಾಮದ ಶ್ರೀ ಬಸವೇಶ್ವರ ಸಮುದಾಯ ಭವನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ವಿಭಾಗದಿಂದ ರೂ. 75 ಸಾವಿರ ಮಂಜೂರಾತಿ ಪತ್ರವನ್ನು ಹೆಬ್ಬಾಲೆ ವಲಯದ ಮೇಲ್ವಿಚಾರಕ ವಿನೋದ್ ಕುಮಾರ್ ವಿತರಣೆ ಮಾಡಿದರು. ಈ ಸಂದರ್ಭ ಶ್ರೀ ಬಸವೇಶ್ವರ ಸಮುದಾಯ ಭವನದ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಟಿ.ಯು. ಶಂಕರಮೂರ್ತಿ ಹಾಗೂ ಸೇವಾ ಪ್ರತಿನಿಧಿ ಮತ್ತು ದೇವಸ್ಥಾನದ ಪದಾಧಿಕಾರಿಗಳು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.