ಕೂಡಿಗೆ, ಮಾ. 7: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಗುಮ್ಮನಕೊಲ್ಲಿ ಬಿ ಒಕ್ಕೂಟದ ಸದಸ್ಯರಿಗೆ ನಗದು ರಹಿತ ಬ್ಯಾಂಕಿಂಗ್ ವ್ಶವಹಾರದ ತರಬೇತಿ ಕಾರ್ಯಕ್ರಮ ನಡೆಯಿತು

ತಾಂತ್ರಿಕ ತರಬೇತಿ ಸಹಾಯಕಿ ಕೂಡ್ಲೂರು ಪ್ರಿಯಾದರ್ಶಿನಿ ತರಬೇತಿ ನೀಡಿದರು. ಈ ಸಂದರ್ಭ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಭಾವನಾ ರವಿಪ್ರಸಾದ್, ಒಕ್ಕೂಟದ ಅಧ್ಯಕ್ಷೆ ಶರ್ಮಿಳಾ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.