ಕೂಡಿಗೆ, ಮಾ. 7: ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ಗ್ರಾಮದ ಕಾವೇರಿ ನದಿಯ ದಂಡೆಯ ಮೇಲೆ ನೆಲೆನಿಂತಿರುವ ಶ್ರೀ ಉಮಾಮಹೇಶ್ವರ ಸ್ವಾಮಿಯ ರಥೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆದ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ರಥದಲ್ಲಿ ಸ್ವಾಮಿಯ ವಿಗ್ರಹ ಮೂರ್ತಿಯನ್ನು ಕುಳ್ಳಿರಿಸಿ, ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ವೀರಗಾಸೆ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ಮಂಗಳ ವಾದ್ಯಗೋಷ್ಠಿಗಳೊಂದಿಗೆ ಶ್ರೀ ಉಮಾಮಹೇಶ್ವರ ರಥದ ಮೆರವಣಿಗೆ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಶಿಶುಪಾಲ, ಕಾರ್ಯದರ್ಶಿ ಸಿ.ಎನ್. ಲೋಕೇಶ್, ಸಮಿತಿಯ ನಿರ್ದೇಶಕರಾದ ಧನೇಂದ್ರ ಕುಮಾರ್, ಶ್ರೀನಿವಾಸ್, ಅಶ್ವತ್ ಕುಮರ್, ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ರಮೇಶ್ ಹಾಗೂ ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.
ಕನ್ನಂಡ ಬೀರಪ್ಪ ದೇವರ ಹಬ್ಬ
ಮಡಿಕೇರಿ, ಮಾ. 7: ಮಡಿಕೇರಿಯ ಶ್ರೀ ಕನ್ನಂಡ ಬೀರಪ್ಪ ದೇವರ ವಾರ್ಷಿಕೋತ್ಸವ ತಾ. 11 ರಂದು ನಡೆಯಲಿದೆ ಎಂದು ಕುಟುಂಬದ ಪಟ್ಟೆದಾರ ಕನ್ನಂಡ ಪೂವಯ್ಯ ಅವರು ತಿಳಿಸಿದ್ದಾರೆ.