ನಾಪೆÉÇೀಕ್ಲು, ಮಾ. 7: ನಾಪೆÉÇೀಕ್ಲು ಗ್ರಾಮದ ಶ್ರೀ ಭಗವತಿ ದೇವರ ಹಬ್ಬವು ತಾ. 17 ರಿಂದ 21 ರವರೆಗೆ ನಡೆಯಲಿದೆ. ತಾ. 17 ರಂದು 6 ಗಂಟೆಗೆ ಬಂಡಾರ ತರುವದು, ರಾತ್ರಿ 9 ಗಂಟೆಗೆ ದೀಪಾರಾಧನೆ (ಅಂದಿ ಬೊಳಕ್) ನಂತರ ಬೊಳಕಾಟ್, 10 ಗಂಟೆಗೆ ಶ್ರೀ ಭದ್ರಕಾಳಿ ದೇವರ ಕೋಲ ನಡೆಯಲಿದೆ, ತಾ. 18 ರಂದು ದೇವರ ಮೂರ್ತಿ ಹೊತ್ತು ಊರ ಪ್ರದಕ್ಷಿಣೆ, ತಾ. 19 ರಂದು ಪವಿತ್ರ ಪಟ್ಟಣಿ ಹಬ್ಬ ಎತ್ತು ಪೋರಾಟ ನಂತರ ಅನ್ನದಾನ, ಸಂಜೆ ದೇವರ ಮೂರ್ತಿ ಹೊತ್ತು ದೇವಾಲಯದ ಪ್ರದಕ್ಷಿಣೆ, ತಾ. 20 ರಂದು ಸಾಯಂಕಾಲ ತೆಂಗಿನಕಾಯಿಗೆ ಗುಂಡು ಹೊಡೆಯುವದು, ನಂತರ ಪವಿತ್ರ ಕಾವೇರಿ ನದಿಯಲ್ಲಿ ದೇವರ ಜಳಕ ನಗರದಲ್ಲಿ ಮೆರವಣಿಗೆ ನಂತರ ದೇವಾಲಯದಲ್ಲಿ ನೃತ್ಯ ಬಲಿಯೊಂದಿಗೆ ದೇವಳದ ಪ್ರದಕ್ಷಿಣೆ ನಂತರ ರಾತ್ರಿಯಿಂದ ಬೆಳಗಿನ ಜಾವದ ವರೆಗೆ ವಿವಿಧ ದೇವರ ಕೋಲ ನುಚ್ಚುಟೆ, ನರಿಪೂದ, ಅಂಜಿಕೂಟ್ ಮೂರ್ತಿ ಕೋಲಗಳು ನಡೆಯಲಿದ್ದು ತಾ. 21 ರಂದು 10 ಗಂಟೆಗೆ ಕಲ್ಯಾಟ ಅಜ್ಜಪ್ಪ ದೇವರ ಕೋಲ, ಮಧ್ಯಾಹ್ನ ವಿಷ್ಣು ಮೂರ್ತಿ ದೇವರ ಕೋಲ ದೇವರಿಗೆ ಬಲಿ ಕಾರ್ಯಕ್ರಮ ನಂತರ ಅನ್ನದಾನದೊಂದಿಗೆ ಹಬ್ಬವು ಮುಕ್ತಾಯ ಗೊಳ್ಳಲಿದೆ.

ಬೆಳ್ಳುಮಾಡು: ವೀರಾಜಪೇಟೆ ಸಮೀಪದ ಬೆಳ್ಳುಮಾಡು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಅಡ್ಕೋಣಿ ಸಾರ್ತಾವು ದೇವರ ವಾರ್ಷಿಕ ಕುಂಬ್ಯಾರ್ ಉತ್ಸವ ತಾ. 14 ರಂದು ನಡೆಯಲಿದೆ. ಅಂದು ಪೂರ್ವಾಹ್ನ 11.30 ಕ್ಕೆ ಎತ್ತುಪೋರಾಟ, 1.30 ಕ್ಕೆ ಮಹಾಪೂಜೆ, 2.30 ಕ್ಕೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಾಗೂ ಸಂಜೆ 5 ಗಂಟೆಗೆ ಭಂಡಾರ ನೋಡುವದು ಇತ್ಯಾದಿ ನಡೆಯಲಿದೆ ಎಂದು ದೇವತಕ್ಕಮುಖ್ಯಸ್ಥ ಚಂಗುಲಂಡ ಕಿಶನ್ ಸುಬ್ಬಯ್ಯ ತಿಳಿಸಿದ್ದಾರೆ.