ಪಿ.ಜಿ. ಚಂಗಪ್ಪ

ಗೋಣಿಕೊಪ್ಪಲು ವರದಿ, ಮಾ. 7: ದೇಶದಲ್ಲಿರುವ 7000 ದಷ್ಟು ಕಾಡು ಜಾತಿಯ ಹಣ್ಣುಗಳನ್ನು ಆಹಾರೋತ್ಪನ್ನವಾಗಿ ಮಾರುಕಟ್ಟೆಗೆ ತರುವ ಮೂಲಕ ಭವಿಷ್ಯದಲ್ಲಿನ ಆಹಾರ ಕೊರತೆಯನ್ನು ನೀಗಿಸಲು ಪ್ರಯತ್ನಿಸಬೇಕು ಎಂದು ಬೆಂಗಳೂರು ಐಎಸ್‍ಇಸಿ ಪ್ರಾಧ್ಯಾಪಕ ಪಿ.ಜಿ. ಚಂಗಪ್ಪ ಹೇಳಿದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮತ್ತು ಬೆಂಗಳೂರು ತೋಟಗಾರಿಕೆ ಅಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಕಾಡು ಹಣ್ಣುಗಳ ಸಂರಕ್ಷಣೆಯ ಬಗ್ಗೆ ಆಯೋಜಿಸ ಲಾಗಿದ್ದ ವಿಚಾರಗೋಷ್ಠಿ ಮತ್ತು ರೈತರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪದಾರ್ಥಗಳಿಂದ ಪೋಷಕಾಂಶಗಳು ಲಭಿಸುತ್ತಿದೆ. ಆದರೆ 7000 ಕಾಡು ಜಾತಿಯ ಹಣ್ಣುಗಳಿಂದ ಪೋಷಕಾಂಶಗಳು ಅಧಿಕ ಲಭಿಸಲಿದೆ. ಸುಲಭವಾಗಿ ಮಾರುಕಟ್ಟೆಗೆ ಪ್ರವೇಶಿಸುವಂತಹ ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳನ್ನು ವ್ಯಾಪಾರ ಮಾಡಬೇಕಿದೆ ಎಂದು ಹೇಳಿದರು.

ಅರಣ್ಯ ಮಹಾವಿದ್ಯಾಲಯದ ನಿವೃತ್ತ ನಿರ್ದೇಶಕ ಬಿ.ಸಿ. ಉತ್ತಯ್ಯ ಮಾತನಾಡಿ, ಕಾಡು ಜಾತಿ ಹಣ್ಣುಗಳ ಬಗ್ಗೆ ಸಂಶೋಧನೆ ಕಡಿಮೆ ಇದೆ ಮತ್ತು ಹಣ್ಣುಗಳನ್ನು ಬೆಳೆಯುವದು ತುಂಬಾ ಶ್ರಮದ ಕೆಲಸ ಎಂದು ಹೇಳಿದರು.

ಕಾಡು ಜಾತಿಯ ಹಣ್ಣುಗಳಲ್ಲಿ ಯಾವದನ್ನು ಬೆಳೆಯಬಹುದು ಮತ್ತು ಪ್ರಯೋಜನಕಾರಿ ಹಣ್ಣನ್ನು ಪತ್ತೆಹಚ್ಚಬೇಕು ಎಂದು ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಎನ್.ಎ. ಪ್ರಕಾಶ್ ಹೇಳಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು.