ನಾಪೆÇೀಕ್ಲು, ಮಾ. 7: ಅನಾಧಿಕಾಲದಿಂದಲೂ ಅರಣ್ಯಗಳಲ್ಲಿ ವಾಸಿಸುತ್ತಾ ಗಿಡಮರಗಳನ್ನು ಪೂಜ್ಯ ಭಾವನೆಯಿಂದ ನೋಡಿಕೊಂಡು ಸಂರಕ್ಷಿಸುತ್ತಿದ್ದ ಕಾಡಿನ ಮಕ್ಕಳನ್ನು ಅರಣ್ಯಗಳಿಂದ ಹೊರ ಹಾಕಿರುವದು ಈಗಿನ ಅರಣ್ಯ ಬೆಂಕಿ ಅನಾಹುತಕ್ಕೆ ಕಾರಣವಾಗಿದೆ ಎಂದು ಸೇವ್ ಕೊಡಗು ಫೆÇೀರಂನ ಬಿದ್ದಾಟಂಡ ಜಿನ್ನು ನಾಣಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಅರಣ್ಯ ವಾಸಿಗಳು ಪೂಜಾ ಸ್ಥಳ, ಭಕ್ತಿ ಭಾವನೆ, ಸಂಸ್ಕøತಿ ಮತ್ತು ಧರ್ಮವನ್ನೇ ಕಳೆದುಕೊಂಡಿದ್ದಾರೆ. ಇವರ ನೋವು, ಕಣ್ಣೀರು ಇಂದು ಶಾಪವಾಗಿ ಮಾರ್ಪಟ್ಟಿದೆ ಎಂದರು. ರಕ್ಷಿತಾರಣ್ಯಗಳಲ್ಲಿ ಬಿದಿರು ಸೇರಿದಂತೆ ಇತರ ಮೇವುಗಳ ಹಾಗೂ ನೀರಿನ ಕೊರತೆ ಕಂಡು ಬರುತ್ತಿದೆ. ಅರಣ್ಯ ಇಲಾಖೆ ನೆರಳು ನೀಡುವ, ಗಿಡ ಮರಗಳನ್ನು ಬೆಳೆಸುವದರ ಬದಲು, ಬೇಸಿಗೆಯಲ್ಲಿ ಸುಲಭವಾಗಿ ಬೆಂಕಿ ಹಚ್ಚಿಕೊಳ್ಳುವ ತೇಗದ ಮರಗಳನ್ನು ಬೆಳೆಸುತ್ತಿದೆ ಎಂದು ಆರೋಪಿಸಿದ ಅವರು ಬೆಂಕಿ ಬಿದ್ದ ಜಾಗಗಳಲ್ಲಿ ಕೇವಲ ಕುರಚಲು ಗಿಡಗಳು ಮಾತ್ರ ಬೆಳೆಯುತ್ತದೆ. ಅದರ ಬದಲು ಅರಣ್ಯ ಇಲಾಖೆಯು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರಣ್ಯಗಳಲ್ಲಿ ಮೇವಿಲ್ಲದ ಕಾರಣ ಪ್ರಾಣಿ ಪಕ್ಷಿಗಳು ಕೊಡಗಿನ ಕಾಫಿ ತೋಟಗಳಲ್ಲಿ ರಕ್ಷಣೆ ಪಡೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಮುಂದೊಂದು ದಿನ ಕೊಡಗಿನ ಸ್ವಂತ ಒಡೆತನದ ಕಾಫಿ ತೋಟಗಳು ಮೃಗಾಲಯಗಳಾಗಿ ಪರಿವರ್ತನೆಗೊಳ್ಳಲಿವೆ. ಇದಕ್ಕೆ ಕೊಡಗಿನ ಡೋಂಗಿ ಪರಿಸರವಾದಿಗಳ ಕಾರ್ಯ ಚಟುವಟಿಕೆಗಳೇ ಕಾರಣ ಎಂದು ದೂಷಿಸಿದರು.
ಬಿದ್ದಾಟಂಡ ಟಿ. ದಿನೇಶ್ ಮಾತನಾಡಿ, ಕಾಡ್ಗಿಚ್ಚು ಜಾಥಕ್ಕೆ ಶಾಲಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಅವರಿಗೆ ಶಾಲಾ ಪಠ್ಯಗಳಲ್ಲಿಯೇ ಮಾಹಿತಿ ನೀಡಲಾಗುತ್ತಿದೆ. ಇವರು ತಮ್ಮ ಬೇಳೆ ಬೇಯಿಸಿಕೊಳ್ಳಲು ವಿದ್ಯಾರ್ಥಿಗಳ ಮೂಲಕ ಜಾಥ ನಡೆಸುವದರ ಬದಲು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಲಿ ಎಂದು ಸವಾಲು ಹಾಕಿದರು.
ಪರಿಸರವಾದಿಗಳು ಹೆಸರಿಗೆ ಮಾತ್ರ ಪರಿಸರ, ಕಾವೇರಿ ನದಿ ರಕ್ಷಣೆ ಎಂದು ಬೊಬ್ಬಿಡುತ್ತಾರೆ. ಆದರೆ ಅವರು ನಿಜವಾಗಿ ಮಾಡುವದು ರೆಸಾರ್ಟ್ ದಂಧೆ ಮತ್ತು ಪರಿಸರ ರಕ್ಷಣೆಯ ಹೆಸರಿನಲ್ಲಿ ಹಣ ಲೂಟಿ ಎಂದರು. ರಾಜಕೀಯ ನಾಯಕರು, ಅಧಿಕಾರಿಗಳು ಪರಿಸರವಾದಿಗಳ ಕೈಗೊಂಬೆಯಾಗಿದ್ದಾರೆ. ಕಳೆದ 15 ವರ್ಷಗಳಿಂದ ನಮ್ಮ ಸಂಘಟನೆಯು ಯಾರಿಂದಲೂ ಒಂದು ರೂ. ಕೂಡ ಪಡೆಯದೆ ನಿಸ್ವಾರ್ಥವಾಗಿ ಹೋರಾಟ ನಡೆಸುತ್ತಾ ಬಂದಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ನಿಡುಮಂಡ ಕೃತಿ ಇದ್ದರು.