ಮಡಿಕೇರಿ, ಮಾ.6 : ನಾಪೋಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನಕ್ಕೆ ಕಿರು ಕ್ರೀಡಾ ಗ್ಯಾಲರಿ ಹಾಗೂ ತಡೆಗೋಡೆ ನಿರ್ಮಿಸಲು ಮೈಸೂರು, ಕೊಡಗು ಕ್ಷೇತ್ರದ ಸಂಸದ ಪ್ರತಾಪ್‍ಸಿಂಹ ಅವರು 20 ಲಕ್ಷ ರೂ.ಗಳನ್ನು ಮಂಜೂರು ಮಾಡಿರುವದಾಗಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಈ ಬಾರಿ ಮುನ್ನಡೆಸುತ್ತಿರುವ ನಾಪೋಕ್ಲುವಿನ ಕುಲ್ಲೇಟಿರ ಕುಟುಂಬಸ್ಥರು ತಿಳಿಸಿದ್ದಾರೆ.ಇತ್ತೀಚೆಗೆ ಕುಟುಂಬದ ನಿಯೋಗ ಸಂಸದರ ಮೈಸೂರಿನ ಸ್ವಗೃಹದಲ್ಲಿ ಭೇಟಿಯಾದ ಸಂದರ್ಭ ಪ್ರತಾಪ್ ಸಿಂಹ ಅವರು ಹಣ ಮಂಜೂರಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹಾಕಿ ಹಬ್ಬದ
(ಮೊದಲ ಪುಟದಿಂದ) ಸಮಿತಿಯ ಅಧ್ಯಕ್ಷ ಶಂಭುಮಂದಪ್ಪ ತಿಳಿಸಿದ್ದಾರೆ. ಕುಲ್ಲೇಟಿರ ಹಾಕಿ ನಮ್ಮೆ 2018 ಏಪ್ರಿಲ್ 15 ರಿಂದ ಮೇ 13 ರವರೆಗೆ ನಡೆಯಲಿದೆ.
ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿಯಾದ ಸಂದರ್ಭ ಕುಲ್ಲೇಟಿರ ಹಾಕಿ ಹಬ್ಬದ ಸಮಿತಿಯ ಕಾರ್ಯದರ್ಶಿ ಅಜಿತ್ ನಾಣಯ್ಯ, ಸಂಚಾಲಕರಾದ ಅರುಣ್ ಬೇಬ, ದೇವಿ ದೇವಯ್ಯ, ರಾಜೇಶ್ ತಮ್ಮಯ್ಯ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಚಿಮಂಡ ಗಪ್ಪಣ್ಣ ಮತ್ತಿತರರು ಹಾಜರಿದ್ದರು.