ಭಾಗಮಂಡಲ, ಮಾ. 6: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಶ್ರಯದಲ್ಲಿ ಚೇರಂಬಾಣೆ ಮಾರುಕಟ್ಟೆ ಆವರಣದಲ್ಲಿ ರೂ. 2 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ರೈತರ ಸಂತೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕಾಂಗೀರ ಸತೀಶ್ ಉದ್ಘಾಟಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಮಾತನಾಡಿ, ಮಾರುಕಟ್ಟೆ ಆವರಣದಲ್ಲಿ ಇನ್ನಷ್ಟು ಸ್ಥಳಾವಕಾಶವಿದ್ದು, ಅಗತ್ಯವಿರುವ ಕಟ್ಟಡಗಳನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಸಮಿತಿ ಸದಸ್ಯ ಬೆಪ್ಪುರನ ಮೇದಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್, ಬಾಚರಣಿಯಂಡ ಸುಮನ್ ಇನ್ನಿತರರು ಉಪಸ್ಥಿತರಿದ್ದರು.