ಮಡಿಕೇರಿ, ಮಾ. 6: ಜಿಲ್ಲಾಧಿಕಾರಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜೆ.ಆರ್. ಪ್ರಕಾಶ್ ಅವರು ಫೆಬ್ರವರಿ 28 ರಂದು ನಿವೃತ್ತಿ ಹೊಂದಿದ್ದು, ಪ್ರಕಾಶ್ ಅವರಿಗೆ ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘದ ವತಿಯಿಂದ ಶಾಲು, ಫಲ, ತಾಂಬೂಲ ನೀಡಿ ಬೀಳ್ಕೊಡುಗೆ ನೀಡಲಾಯಿತು.

ನಗರದ ಜಿಲ್ಲಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಭಾರಂಭದಲ್ಲಿ ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಪಿ.ಎಂ. ಬಾಬು, ಸಂಘದ ಉಪಾಧ್ಯಕ್ಷ ಪಿ.ಎಸ್. ಗಣೇಶ್, ಕಾರ್ಯದರ್ಶಿ ಆನಂದ, ಸದಸ್ಯರುಗಳಾದ ಅಕ್ಬರ್, ಧನಂಜಯ್, ಮಂಜು, ಅಕ್ಬರ್ ಅಲಿ, ವಾಸು ಇತರರು ಇದ್ದರು.