ಕುಶಾಲನಗರ, ಮಾ. 6: ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ 7ನೇ ವಾರ್ಷಿಕೋತ್ಸವ ಕೊಡವ ಸಮಾಜದಲ್ಲಿ ನಡೆಯಿತು. ಸಮುದಾಯದ ಮಕ್ಕಳಿಗೆ ಹಲವು ಸ್ಪರ್ಧಾ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಸಮಾಜದ ಅಧ್ಯಕ್ಷ ಎಸ್.ಬಿ ರಮೇಶ್, ಕುಶಾಲನಗರ ಸುತ್ತಮುತ್ತ ವ್ಯಾಪ್ತಿಯಲ್ಲಿ ಮುನ್ನೂರಕ್ಕೂ ಅಧಿಕ ಬಿಲ್ಲವ ಸಮುದಾಯದ ಕುಟುಂಬಗಳಿವೆ. ಒಗ್ಗಟ್ಟಿನಿಂದ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವದರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವದು ಸಮಾಜದ ಕರ್ತವ್ಯವಾಗಿದೆ ಎಂದರು.

ಸಮಾಜದ ಪ್ರಮುಖರಾದ ರೋಹಿತ್, ಕೃಷ್ಣಪ್ಪ, ಪದ್ಮಯ್ಯ, ದಾಮೋದರ್, ಅಣ್ಣಯ್ಯ, ಸರಳಾ ರಾಮಣ್ಣ, ಗಂಗಮ್ಮ ಮತ್ತಿತರ ಪ್ರಮುಖರು ಇದ್ದರು.