ನಾಪೋಕ್ಲು, ಮಾ. 6: ರಸ್ತೆ ನಿರ್ಮಾಣಕ್ಕಾಗಿ ಚೆರಿಯಪರಂಬು ನಿವಾಸಿಗಳು ಬಹುದಿನಗಳಿಂದ ಬೇಡಿಕೆಯನ್ನಿರಿಸಿದ್ದು ರೂ. 5 ಲಕ್ಷ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ನಡೆಸಲಾಗುವದು ಎಂದು ಶಾಸಕ ಕೆ.ಜಿ. ಬೊಪಯ್ಯ ಹೇಳಿದರು.
ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಚೆರಿಯಪರಂಬು ರಸ್ತೆ ಅಭಿವೃದ್ಧಿಗಾಗಿ ರೂ. 5 ಲಕ್ಷ ಅನುದಾನ ಹಾಗೂ ಹೆಚ್ಚುವರಿ ರೂ. 3ಲP ಅನುದಾನ ಒದಗಿಸಲಾಗಿದ್ದು, ಹಂತಹಂತವಾಗಿ ರಸ್ತೆ ಅಭಿವೃದ್ಧಿಯನ್ನು ಕೈಗೊಳ್ಳಲಾಗುವದು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ, ಚೆರಿಯಪರಂಬು ನಿವಾಸಿಗಳು ರಸ್ತೆ ಅಭಿವೃದ್ಧಿ ಪಡಿಸುವಂತೆ ನಾಲ್ಕೈದು ವರ್ಷಗಳಿಂದ ಬೇಡಿಕೆಯನ್ನಿರಿಸಿದ್ದರು.
ಗ್ರಾಮಸ್ಥರು ಸ್ಥಳೀಯವಾಗಿ ಒಗ್ಗೂಡಿ ರಸ್ತೆ ಅಭಿವೃದ್ಧಿಗಾಗಿ ಧರಣಿಯನ್ನು ನಡೆಸಿದ್ದರು. ಇದೀಗ ಶಾಸಕರ ಅನುದಾನದಲ್ಲಿ ಕಾಂಕ್ರೀಟ್ ರಸ್ತೆಯನ್ನು ಮಾರ್ಪಡಿಸಿ ರಸ್ತೆ ಡಾಮರೀಕರಣ ಕೈಗೊಳ್ಳಲಾಗುವದು. ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಉಪಾಧ್ಯಕ್ಷ ಸಂತು ಸುಬ್ರಮಣಿ, ಬಿಜೆಪಿ ಪ್ರಮುಖರಾದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ತಳೂರು ಕಿಶೋರ್ ಕುಮಾರ್, ಪಾಡಿಯಮ್ಮಂಡ ಮನು ಮಹೇಶ್, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಗ್ರಾಮ ಪಂಚಾಯಿತಿ ಸದಸ್ಯೆ ಸುಶೀಲಮ್ಮ, ಉಮ್ಮರ್, ಉಸ್ಮಾನ್, ಹಮಿದ್, ಮಹಮ್ಮದ್, ಆನಂದ ಸ್ವಾಮಿ, ಶ್ರೀನಿವಾಸ್ ಹಾಗೂ ಕಲ್ಲುಮೊಟ್ಟೆ ನಿವಾಸಿಗಳು ಪಾಲ್ಗೊಂಡಿದ್ದರು. -ದುಗ್ಗಳ