ಗುಡ್ಡೆಹೊಸೂರು, ಮಾ. 6: ಇಲ್ಲಿಗೆ ಸಮೀಪದ ಸುಣ್ಣದಕೆರೆ ಗ್ರಾಮದಲ್ಲಿ ನೂತನವಾಗಿ ಶ್ರೀ ಮುನೇಶ್ವರ ಮತ್ತು ನಾಗದೇವರ ಗುಡಿಗಳನ್ನು ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಕುಶಾಲನಗರದ ಪುರೋಹಿತರಾದ ಡಾ. ರಾಧಕೃಷ್ಣ ಭಟ್ ಮತ್ತು ಮಂಜುನಾಥ್ ಭಟ್ ಅವರು ಪೂಜಾ ಕಾರ್ಯ ನಡೆಸಿದರು. ಈ ಸಂದರ್ಭ ಸಮಿತಿ ಅಧ್ಯಕ್ಷ ಪೊನ್ನಪ್ಪ, ಕಾರ್ಯದರ್ಶಿ ಗೋಪಾಲ ಮತ್ತು ಸಮಿತಿ ಸದಸ್ಯರು ಹಾಜರಿದ್ದರು.