ಭಾಗಮಂಡಲ, ಮಾ. 6 : ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ನೂತನ ಅಧ್ಯಕ್ಷರಾಗಿ ನಿಡುಬೆ ವೆಂಕಟರಮಣ ಹಾಗೂ ಉಪಾಧ್ಯಕ್ಷರಾಗಿ ನಿಡ್ಯಮಲೆ ಅರುಣ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಕೆ.ಡಿ. ರದೀಶ್, ಖಜಾಂಚಿಯಾಗಿ ಎನ್.ಎಸ್.ವಸಂತ, ಸಾಮಾಜಿಕ ಜಾಲತಾಣ ಸದಸ್ಯರಾಗಿ ಕುದುಪಜೆ ಪ್ರದೀಪ್, ಹಾಗೂ ಸದಸ್ಯರಾಗಿ ಕುಯ್ಯಮುಡಿ ಮನು, ಮಾಚಿಮಂಡ ಈಶ್ವರ್, ಕುಂಬನ ಹರೀಶ್, ಮತ್ತಾರಿ ದೇವಿಪ್ರಸಾದ್, ಗೇಣಿಯಾರ್ ಶಿವಾನಂದ, ಬಷೀರ್, ಪ್ರದೀಶ್ ಕೆ.ಡಿ. ಹಾಗೂ ಕುದುಪಜೆ ಯಶ್ವಂತ ಆಯ್ಕೆಗೊಂಡಿದ್ದಾರೆ.