ಕೂಡಿಗೆ, ಮಾ.6: ಕುಶಾಲನಗರ ಗುಡ್ಡೆಹೂಸೂರು ಮಧ್ಯೆ ಮಾದಪಟ್ಟಣದ ಹತ್ತಿರ ಮಡಿಕೇರಿ ಕಡೆಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಟಾಟಾ ಏಸಿ ವ್ಯಾನ್ (ಕೆ.ಎ.12 ಬಿ.3518) ಹಾಗೂ ಬೈಕ್
( ಕೆ.ಎ.13 ಡಿ. 8730) ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಾದ ಕೂಡಿಗೆ ಸಮೀಪದ ಸೀಗೆಹೊಸೂರು ಗ್ರಾಮದ ರಾಜೇಶ ಮತ್ತು ಹರೀಶ ಎಂಬವರಿಗೆ ಬಲ ಕಾಲು ಮುರಿದಿವೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರ್ರೆಗೆ ಸಾಗಿಸಲಾಗಿದೆ.