ಸುಂಟಿಕೊಪ್ಪ, ಮಾ.6 : ಕಂಬಿಬಾಣೆಯ ಶ್ರೀರಾಮ ಮತ್ತು ಚಾಮುಂಡೇಶ್ವರಿ ಸೇವಾ ಸಮಿತಿ ಸದಸ್ಯರುಗಳು ದೇವಸ್ಥಾನದ ಜೀರ್ಣೋದ್ಧಾರ ನಂತರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳುವಂತೆ ಸಂಕಲ್ಪವನ್ನು ಮಾಡಿದ್ದರು. ಅದರಂತೆ ದೇಶ ರಕ್ಷಣೆ, ಪ್ರಕೃತಿ ಸಂರಕ್ಷಣೆ, ಮಳೆ, ಬೆಳೆ ಜನರಲ್ಲಿ ಸಾಮರಸ್ಯ ಮೂಡಿಸಲು ತಾ.5ರಂದು ದೇವಾಲಯ ಸಮಿತಿ ಸದಸ್ಯರುಗಳಾದ ಲವಶಾಂತಪ್ಪ, ಚಂದ್ರಹಾಸರೈ, ಸುಬ್ರಾಯ, ಬಿ.ಕೆ.ಗಿರೀಶ್, ಜಯರಾಮ್, ಲವನೈಪುಣಿ ಕಗ್ಗೋಡ್ಲು, ಡಿ.ಎಸ್.ಹರೀಶ್, ಎಚ್.ಎಸ್.ಆಕಾಶ್ ಪಾದಯಾತ್ರೆ ಕೈಗೊಂಡಿದ್ದಾರೆ.