ಮಡಿಕೇರಿ, ಮಾ. 5: ‘ಶಕ್ತಿ’ ದೈನಿಕದ 61ನೇ ಹುಟ್ಟುಹಬ್ಬದ ವಾರ್ಷಿಕೋತ್ಸವದೊಂದಿಗೆ, ಪತ್ರಿಕಾಲಯದಲ್ಲಿ ವಾರ್ಷಿಕ ಪೂಜೆ, ಪ್ರಾರ್ಥನೆಯ ಬಳಿಕ, ಈ ಪ್ರಯುಕ್ತ ಆಯೋಜಿಸಿದ್ದ ಕತೆ, ಕವನ, ಸಣ್ಣಕತೆ ಮುಂತಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಮಾ. 4ರಂದು ನಡೆಯಿತು.ಈ ಸಂದರ್ಭ ‘ಶಕ್ತಿ’ಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಆಶಯ ನುಡಿಯಾಡುತ್ತಾ, ಕನ್ನಡ ನುಡಿ, ಭಾಷೆ, ಸಣ್ಣಕತೆಗಳಿಗೆ ಇಂದಿನ ಆಧುನಿಕ ವ್ಯವಸ್ಥೆಯಿಂದ ಪ್ರೋತ್ಸಾಹದ ಕೊರತೆ ಕಾಣುವಂತಾಗಿದೆ ಎಂದು ಬೊಟ್ಟು ಮಾಡಿದರು. ಅಲ್ಲದೆ ಕೊಡಗಿನ ಸಂಸ್ಕøತಿಗೂ ಪರೋಕ್ಷ ಹೊಡೆತದೊಂದಿಗೆ ಸಂಪ್ರದಾಯಗಳು ಅಳಿಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ದಿಸೆಯಲ್ಲಿ ‘ಶಕ್ತಿ’ ಕಲ್ಪಿಸಿರುವ ವೇದಿಕೆಗಳನ್ನು
(ಮೊದಲ ಪುಟದಿಂದ) ಆಸಕ್ತರು ಉಳಿಸಿಕೊಂಡು ಸಾಹಿತ್ಯದ ಬೆಳವಣಿಗೆಗೆ ಹಿರಿಯರೂ ಕಿರಿಯರಿಗೆ ಮಾರ್ಗದರ್ಶಕರಾಗುವಂತೆ ಅವರು ಕರೆ ನೀಡಿದರು.
ಸಾಹಿತಿ ಹಾಗೂ ಆಕಾಶವಾಣಿ ಸುದ್ದಿ ವಾಚಕ ನಾಗೇಶ್ ಕಾಲೂರು ಈ ಸಂದರ್ಭ ಮಾತನಾಡುತ್ತಾ, ಭಾಷೆಯ ಮೇಲೆ ಹಿಡಿತದೊಂದಿಗೆ ನುಡಿಗಳಲ್ಲಿ ಜಾಣ್ಮೆಯಿಂದ ಓದುಗರಿಗೆ ಸೆಳೆಯುವ ಮಂಥನ ನಡೆಸುವಂತೆ ಬರಹಗಾರರಿಗೆ ತಿಳಿ ಹೇಳಿದರು. ಈ ಕುರಿತು ಹಿರಿಯರ ಬರವಣಿಗೆಯ ಗುಟ್ಟು ಯಾವ ರೀತಿ ಓದುಗರಲ್ಲಿ ಸ್ವಾರಸ್ಯ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಉದಾಹರಿಸಿದರು.
‘ಶಕ್ತಿ’ ಸಂಪಾದಕ ಹಾಗೂ ಆಡಳಿತಾಧಿಕಾರಿ ಜಿ. ಚಿದ್ವಿಲಾಸ್ ಅವರು ಮಾತನಾಡಿ, ಪುಟಾಣಿಗಳು ಸಹಿತ ಯುವ ಬರಹಗಾರರು ‘ಶಕ್ತಿ’ ಹುಟ್ಟುಹಬ್ಬದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವದು ಶ್ಲಾಘನೀಯ ಎಂದರಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಹಲವು ಮುಖಗಳಲ್ಲಿ ನಾಡು, ನುಡಿ, ಸಂಸ್ಕøತಿ, ವಿಚಾರಗಳ ಬೆಳವಣಿಗೆಗೆ ಕೊಡಗಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಬೊಟ್ಟು ಮಾಡಿದರು. ತೀರ್ಪುಗಾರರಾಗಿದ್ದ ಶಿಕ್ಷಕಿ ಜಯಲಕ್ಷ್ಮೀ, ರಫೀಕ್ ಅಹ್ಮದ್ ಅವರುಗಳು ಅನಿಸಿಕೆ ವ್ಯಕ್ತಪಡಿಸಿದರು.
ಚಿರಂತನ್ ಚಿದ್ವಿಲಾಸ್ ಪ್ರಾರ್ಥನೆಯೊಂದಿಗೆ, ಎಂ.ಇ. ಮಹಮ್ಮದ್ದ ವಿಜೇತರ ಮಾಹಿತಿ ನೀಡಿದರು. ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ನಿರೂಪಿಸಿ ಉಪ ಸಂಪಾದಕ ಉಜ್ವಲ್ ರಂಜಿತ್ ಸ್ವಾಗತಿಸಿದರು.
ದ್ವಿತೀಯ ಅವಧಿಯೊಂದಿಗೆ ‘ಶಕ್ತಿ’ ಬಳಗದ ಆಂತರಿಕ ಸಮಾರಂಭದಲ್ಲಿ ಪ್ರಧಾನ ಸಂಪಾಧಕರು ಹಾಗೂ ಸಂಪಾದಕರು ವರದಿಗಾರಿಕೆಯ ಹೊಣೆಗಾರಿಕೆ ಪತ್ರಿಕಾ ಏಜೆನ್ಸಿಗಳ ನಿರ್ವಹಣೆ, ಲೆಕ್ಕಪತ್ರ ವಿಭಾಗದ ಕಾರ್ಯಕ್ಷಮತೆ, ಸುದ್ದಿ ಮಹತ್ವ, ವರದಿಗಾರರ ಹೊಣೆಗಾರಿಕೆ ಇತ್ಯಾದಿ ಕುರಿತು ಸಲಹೆಗಳನ್ನು ನೀಡಿದರು.
ಈ ಸಂದರ್ಭ ವಿವಿಧ ವಿಭಾಗಗಳಲ್ಲಿನ ಸಾಧನೆಗಾಗಿ ‘ಶಕ್ತಿ’ ಬಳಗದ ಪ್ರಧಾನ ಉಪಸಂಪಾದಕರುಗಳಾದ ಕಾಯಪಂಡ ಶಶಿ ಸೋಮಯ್ಯ, ಕುಡೆಕಲ್ ಸಂತೋಷ್, ಬಿಟಿವಿ ವರದಿಗಾರ ಗೋಪಾಲ್ ಸೋಮಯ್ಯ, ‘ಶಕ್ತಿ’ ಬಳಗದ ಚಂದ್ರಮೋಹನ್, ಸವಿತಾ ಸಂತೋಷ್ ಅವರುಗಳನ್ನು ಗೌರವಿಸಲಾಯಿತು. ಶ್ರೀಮಂಗಲ ಪ್ರತಿನಿಧಿ ಅಜ್ಜಾಮಾಡ ಕಟ್ಟಿಮಂದಯ್ಯ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಪತ್ರಿಕಾಲಯದ ಪ್ರಧಾನ ವ್ಯವಸ್ಥಾಪಕಿ ಹರಿಣಿ ಲೋಕೇಶ್, ವ್ಯವಸ್ಥಾಪಕಿ ಪ್ರಜ್ಞಾ ಜಿ.ಆರ್. , ಕೂಡಿಗೆ ಪ್ರತಿನಿಧಿ ಜಾಜಿ ಮೊದಲಾದವರು ಉಪಸ್ಥಿತರಿದ್ದರು.
ದೈನಂದಿನ ವರದಿಗಳು, ವರದಿಗಾರರ ಕರ್ತವ್ಯಗಳ ಬಗ್ಗೆ ಉಪಸಂಪಾದಕರುಗಳಾದ ಕುಡೆಕಲ್ ಸಂತೋಷ್, ಉಜ್ವಲ್ ರಂಜಿತ್ ಅಭಿಪ್ರಾಯ ಮಂಡಿಸಿದರು. ಪ್ರಜ್ಞಾ ರಾಜೇಂದ್ರ ಪ್ರಾರ್ಥನೆಯೊಂದಿಗೆ, ಸಲಹಾ ಸಂಪಾದಕ ಬಿ.ಜಿ. ಅನಂತಶಯನ ನಿರೂಪಣೆ ಹಾಗೂ ಕಾನೂನಿನ ತೊಡಕುಗಳ ಬಗ್ಗೆ ಗಮನ ಸೆಳೆದರು.
‘ಶಕ್ತಿ’ ಪತ್ರಿಕಾಲಯ ಬಳಗದ ಉದ್ಯೋಗಿಗಳು, ಏಜೆಂಟರು, ವರದಿಗಾರರು, ವಿವಿಧ ಸ್ಪರ್ಧಾ ವಿಜೇತರು, ಹಿತೈಷಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಸ್ವಾಗತಿಸಿ, ಕುಡೆಕಲ್ ಸಂತೋಷ್ ವಂದಿಸಿದರು.
ಬೆಂಗಳೂರಿನ ವಿಶ್ವಾಸ್ ಹೆಗಡೆ ಅವರಿಂದ ಕೊಳಲು ವಾದನ, ಪ್ರಜ್ವಲ್ ರಾಜೇಂದ್ರ ಅವರಿಂದ ಗಿಟಾರ್ ವಾದನ, ಅಂಜಲಿ ಅನಂತಶಯನ, ಉಜ್ವಲ್ ರಂಜಿತ್, ಗಿರೀಶ್ಕಾಂತ್ ಪರಪ್ಪು ಹಾಗೂ ನಿಹಾಲ್ ಸಂತೋಷ್ ಇವರುಗಳಿಂದ ಹಾಡುಗಾರಿಕೆ ನಡೆಯಿತು.