ಮಡಿಕೇರಿ, ಮಾ. 6 : ಕೊಡಗು ಜಿಲ್ಲೆಯ ವಿಶಿಷ್ಟ ಸಂಸ್ಕøತಿ, ಸಾಹಿತ್ಯ, ಸಂಪ್ರದಾಯ ಸಂರಕ್ಷಣೆ ನಿಟ್ಟಿನಲ್ಲಿ ಕೊಡವ ಮತ್ತು ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಗಳು ಗಮನಾರ್ಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಶ್ಲಾಘನೆಗೆ ಅರ್ಹವಾಗಿದೆ ಎಂದು ಮಡಿಕೇರಿ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಕೋರನ ಸರಸ್ವತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಾಲೇಜಿನ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿತ ಶ್ರೀಮತಿ ಸುಲೋಚನ ಡಾ.ಎಂ.ಜಿ. ನಾಗರಾಜ್ ದಂಪತಿ ಸ್ಥಾಪಿಸಿದ ಕೊಡಗು ದತ್ತಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಡಾ.ಕೋರನ ಸರಸ್ವತಿ ಮಾತನಾಡಿದರು.
ಕೊಡಗಿನಲ್ಲಿ ಜಾನಪದವೇ ಸಂಸ್ಕøತಿಯ ಮೂಲ ಆಧಾರವಾಗಿದ್ದು, ಕರ್ನಾಟಕದ ಇತರೆಡೆ ಕಂಡು ಬಾರದ ಅನೇಕ ವಿಶಿಷ್ಟ ನೃತ್ಯ ಪ್ರಾಕಾರಗಳು ಕೊಡಗಿನಲ್ಲಿ ಕಂಡು ಬರುತ್ತದೆ. 56 ಜಾನಪದೀಯ ನೃತ್ಯಗಳ ಪರಂಪರೆ ಕೊಡಗಿನಲ್ಲಿ ಕಂಡು ಬರುತ್ತದೆ ಎಂದು ಮಾಹಿತಿ ನೀಡಿದರಲ್ಲದೇ, ಕೊಡಗಿನಲ್ಲಿ ಸಾಹಿತ್ಯ, ಸಂಸ್ಕøತಿಗಳಿಗೆ ರಾಜರ ಕಾಲದಿಂದಲೂ ಪೆÇ್ರೀತ್ಸಾಹ ಇತ್ತೆಂದು ತಿಳಿಸಿದರು. ಆಧುನಿಕ ದಿನಮಾನಗಳಲ್ಲಿ ಪ್ರವಾಸೋದ್ಯಮದಿಂದಾಗಿ ಕೊಡಗಿನ ಸಂಸ್ಕøತಿ, ಸಂಪ್ರದಾಯಗಳೂ ಹೊರ ನಾಡಿನವರಿಗೆ ಪರಿಚಯವಾಗುತ್ತಿದೆ ಎಂದೂ ಅವರು ಹೇಳಿದರು.
ಕೊಡಗು ಜಿಲ್ಲೆಯ ಪತ್ರಿಕೋದ್ಯಮದ ಬಗ್ಗೆ ವಿಚಾರ ಮಂಡಿಸಿದ ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. 135 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕೊಡಗಿನ ಪತ್ರಿಕಾರಂಗದಲ್ಲಿ 80ಕ್ಕೂ ಅಧಿಕ ಪತ್ರಿಕೆಗಳು ಓದುಗರನ್ನು ತಲುಪುವ ಪ್ರಯತ್ನ ಮಾಡಿದೆ. ಆದರೂ ಮಲೆನಾಡು, ಮಳೆನಾಡು ಜಿಲ್ಲೆಯಲ್ಲಿನ ತಾಂತ್ರಿಕ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಹಲವಷ್ಟು ಉತ್ತಮ ಪತ್ರಿಕೆಗಳು ಸ್ಥಗಿತಗೊಳ್ಳುವಂತಾಯಿತು. ಜಾಗತೀಕರಣದ ನೆಲೆಗಟ್ಟಿನಲ್ಲಿ ಆಧುನಿಕತೆಯ ಅಬ್ಬರದಲ್ಲಿ ಕೊಡಗಿನಂಥ ಪುಟ್ಟ ಜಿಲ್ಲೆಯಲ್ಲಿ ಪತ್ರಿಕಾರಂಗವನ್ನು ಮುಂದಕ್ಕೆ ಸಾಗಿಸುವದು ಸವಾಲಿನ ಕಾರ್ಯವಾಗಿದೆ ಎಂದು ವಿಶ್ಲೇಷಿಸಿದ ಅನಿಲ್, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನ ಪತ್ರಿಕೋದ್ಯಮ ಪಾರರ್ದಶಕವಾಗಿದ್ದು, ಹಳದಿ ಪತ್ರಿಕೋದ್ಯಮದಿಂದ ಹೊರತಾಗಿ ಓದುಗಪರ ಕಾಳಜಿಯೊಂದಿಗೆ ಕೊಡಗಿನ ಹಿತಾಸಕ್ತಿ ಹೊಂದಿದೆ ಎಂದು ಶ್ಲಾಘಿಸಿದರು. ಕೊಡಗಿನಲ್ಲಿ ಹಿಂದಿನ ತಲೆಮಾರಿನ ದಿಗ್ಗಜರು ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿರುವ ಪತ್ರಿಕಾರಂಗ ಈಗಲೂ ಕಲುಷಿತಗೊಂಡಿಲ್ಲ. ಮುಂದೆಯೂ ಇಲ್ಲಿನ ಪತ್ರಿಕಾರಂಗ ಮಾಲಿನ್ಯಗೊಳ್ಳಲಾರದು ಎಂಬ ಭರವಸೆ ವ್ಯಕ್ತಪಡಿಸಿದರು. ದಿ. ಬಿ.ಎಸ್. ಗೋಪಾಲಕೃಷ್ಣ, ಪಂದ್ಯಂಡ ಬೆಳ್ಯಪ್ಪ, ಕಾಕೆಮಾನಿ, ಬಿ.ಡಿ. ಗಣಪತಿ ಮತ್ತಿತರ ಗಣ್ಯರು ಕೊಡಗಿನ ಪತ್ರಿಕೋದ್ಯಮದ ಬೆಳವಣಿಗೆಗೆ ಕಾರಣರಾದ ಬಗ್ಗೆ ಮಾಹಿತಿ ನೀಡಿದ ಅನಿಲ್, ಹಿರಿಯ ರಾಜಕಾರಣಿಗಳಾದ ದಿ. ಆರ್. ಗುಂಡೂರಾವ್, ಎಂ.ಸಿ. ನಾಣಯ್ಯ, ಎ.ಕೆ. ಸುಬ್ಬಯ್ಯ, ಬಿ.ಎ. ಹಸನಬ್ಬ ಅವರು ಕೂಡ ಪತ್ರಿಕಾರಂಗದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಸ್ಮರಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಜಿಲ್ಲೆಯಲ್ಲಿ ಕಸಾಪ ವತಿಯಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ನಿಟ್ಟಿನಲ್ಲಿ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗಿದೆ ಎಂದರಲ್ಲದೆ, ಇತಿಹಾಸ ಅರಿತವನು, ವಾಸ್ತವ ತಿಳಿದವನು ಭವಿಷ್ಯದಲ್ಲಿ ಉತ್ತಮ ಸಾಹಿತ್ಯಕ್ಕೆ ಸೂಕ್ತ ಆಸ್ತಿಯಾಗುತ್ತಾನೆ ಎಂದು ಅಭಿಪ್ರಾಯಪಟ್ಟರು.
ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಇಂದಿನ ಸಮಾಜದಲ್ಲಿ ವಿದ್ಯಾರ್ಥಿ ಪ್ರತಿಭೆಗಳಿಗೆ ಸಾಕಷ್ಟು ಅವಕಾಶಗಳಿವೆ. ಇದನ್ನು ಸೂಕ್ತವಾಗಿ ಬಳಸಿಕೊಳ್ಳಿ ಎಂದು ಕರೆ ನೀಡಿದ ರಲ್ಲದೇ, ಮೊಬೈಲ್ ಲೋಕದಿಂದ ಆದಷ್ಟು ದೂರವಿದ್ದು ಸಾಹಿತ್ಯ ಸಂಬಂಧಿತ ಪುಸ್ತಕಗಳನ್ನು ಓದುವ ಮೂಲಕ ಜ್ಞಾನರ್ಜನೆಯೊಂದಿಗೆ ಸಾಹಿತ್ಯದ ಅಪೂರ್ವ ಲೋಕದಲ್ಲಿ ವಿಹರಿಸಿ ಎಂದು ಸಲಹೆ ನೀಡಿದರು. ಸಾಹಿತ್ಯಾಸಕ್ತಿಯಿಂದಾಗಿ ಗುಣ, ನಡತೆ, ಮಾನಸಿಕ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ ಎಂದೂ ಸಂತೋಷ್ ಸಾಹಿತ್ಯಾಭಿ ರುಚಿಯ ಮಹತ್ವದ ಬಗ್ಗೆ ತಿಳಿಹೇಳಿ ದರು. ಓದು ಹಾಗೂ ಬರವಣಿಗೆಯತ್ತ ಗಮನ ಹರಿಸಿದಲ್ಲಿ ನಮ್ಮೊಳಗಿರುವ ಇನ್ನೊಂದು ವ್ಯಕ್ತಿತ್ವ ಹೊರಬರಲಿದ್ದು, ಉತ್ತಮ ಭವಿಷ್ಯವನ್ನು ರೂಪಿಸಿ ಕೊಳ್ಳಬಹು ದೆಂದು ಕಿವಿಮಾತು ಹೇಳಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಾಧವ ಮೂಡುಕೊಣಾಜೆ ಮಾತನಾಡಿ, ಉತ್ತಮ ನಾಯಕತ್ವದೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯಾದ್ಯಂತ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಶ್ಲಾಘಿಸಿದರು. ಮೊಬೈಲ್ ದಾಸರಾಗದೇ ವಿದ್ಯಾರ್ಥಿಗಳು ಸಾಹಿತ್ಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆಯೂ ಕರೆ ನೀಡಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆÀ ಡಾ. ಪಾರ್ವತಿ ಅಪ್ಪಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥೆ ಲಕ್ಷ್ಮೀದೇವಿ, ಪ್ರಾಧ್ಯಾಪಕರಾದ ರಾಜೀವ್ ಪೆರ್ಲ, ಕರುಣಾಕರ ನಿಡಿಂಜಿ, ಕನ್ನಿಕಾ, ಕ.ಸಾ.ಪ. ಸದಸ್ಯೆ ಮಾಲಾದೇವಿ ಹಾಜರಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿನಿ ತೇಜಸ್ವಿನಿ ಪ್ರಾರ್ಥಿಸಿದರೆ, ಅಕ್ಷಯ್ ನಿರೂಪಿಸಿದರು.