ಉಡುಪಿ, ಮಾ.5 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟಿಸಿದೆ. ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಮಹನೀಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯಲ್ಲಿ ಏಕಲವ್ಯ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದರು. 13 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುತ್ತಿದೆ. ಸಾಧಕರಿಗೆ 2 ಲಕ್ಷ ರೂಪಾಯಿ ನಗದು ಹಾಗೂ ಏಕಲವ್ಯ ಕಂಚಿನ ಪ್ರತಿಮೆ ನೀಡಲಾಗುವದು ಎಂದು ಅವರು ಹೇಳಿದರು. ಈ ಬಾರಿ ಕೊಡಗಿನ ಹಾಕಿ ಆಟಗಾರ ಎಂ.ಬಿ. ಅಯ್ಯಪ್ಪ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಉಳಿದಂತೆ ಹರ್ಷಿತ ಎಸ್ (ಅಥ್ಲೆಟಿಕ್), ರಾಜೇಶ್ ಪ್ರಕಾಶ್ ಉಪ್ಪಾರ್ (ಬ್ಯಾಸ್ಕೇಟ್ ಬಾಲ್), ಪೂರ್ವಿಶ್ ಎಸ್.ರಾಮ್ (ಬ್ಯಾಡ್ಮಿಂಟನ್), ರೇಣುಕಾ ದಂಡಿನ್ (ಸೈಕ್ಲಿಂಗ್), ಮಯೂರ್ ಡಿ ಭಾನು (ಶೂಟಿಂಗ್), ಕಾರ್ತಿಕ್ ಎ (ವಾಲಿಬಾಲ್), ಮಾಳವಿಕ ವಿಶ್ವನಾಥ್ (ಈಜು), ಕೀರ್ತನಾ ಟಿ.ಕೆ (ರೋಯಿಂಗ್), ಸುಕೇಶ್ ಹೆಗ್ಡೆ (ಕಬಡ್ಡಿ), ಗುರುರಾಜ (ಭಾರ ಎತ್ತುವದು), ಸಂದೀಪ್ ಬಿ ಕಾಟೆ (ಕುಸ್ತಿ), ರೇವತಿ ನಾಯಕ ಎಂ. (ಪ್ಯಾರಾ ಈಜುಪಟು) ಪ್ರಶಸ್ತಿಗೆ ಭಾಜನರಾಗಿದ್ದಾರೆ.