ವೀರಾಜಪೇಟೆ, ಮಾ. 5: ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ಮತ್ತು ಅಂಗಳಪರಮೇಶ್ವರಿ ದೇವಾಲಯ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹಬ್ಬವನ್ನು ಆಚರಿಸಲಾಯಿತು. ಪಟ್ಟಣದ ತೆಲುಗರ ಬೀದಿ, ಜೈನರ ಬೀದಿ, ದೊಡ್ಡಟ್ಟಿ ಚೌಕಿ ಹಾಗೂ ದಖ್ಖನಿ ಮಹಲ್ಲಾದವರೆಗೆ ಮೆರವಣಿಗೆ ನಡೆಸಿ ಹಿರಿಯರು-ಕಿರಿಯರೆನ್ನದೆ ಬಣ್ಣದ ನೀರಿನಲ್ಲಿ ಓಕುಳಿ ಆಡಿದರು. ಮೆರವಣಿಗೆಗೆ ಮೊದಲು ಮಾರಿಯಮ್ಮ ಹಾಗೂ ಅಂಗಳ ಪರಮೇಶ್ವರಿ ದೇವಾಲಯಗಳಲ್ಲಿ ಹೋಳಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.