ಮಡಿಕೇರಿ, ಮಾ. 5: ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಂ ಅವರ ಸ್ಮರಣಾರ್ಥ ಸಾಮಾಜಿಕ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗದ ಏಳಿಗೆ, ಅಸ್ಪøಶ್ಯತೆ ನಿರ್ಮೂಲನೆ ಮತ್ತು ದೌರ್ಜನ್ಯ ತಡೆಯುವ ಚಟುವಟಿಕೆ ಹಾಗೂ ಇನ್ನಿತರ ಮಹತ್ವದ ಕಾರ್ಯಗಳಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಏಪ್ರಿಲ್ 5 ಮತ್ತು 14 ರಂದು ಜಿಲ್ಲಾಮಟ್ಟದ ಜನ್ಮ ದಿನಾಚರಣೆಯ ಸಭೆಯಲ್ಲಿ 3 ಪ್ರಶಸ್ತಿಗಳನ್ನು ಪ್ರಧಾನ ಮಾಡುವ ಕಾರ್ಯಕ್ರಮವಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪಡೆಯಲು ಇರುವ ಅರ್ಹತೆಗಳು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಸಮುದಾಯಗಳಿಗೆ ಸೇರಿದವರಾಗಿರಬೇಕು, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್‍ರಾಂ ಅವರ ತತ್ವಗಳನ್ನು ಪಾಲಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಏಳಿಗೆಗೆ ಶ್ರಮಿಸಿದವರಾಗಿದ್ದು, ದೇಶ ಪ್ರೇಮಿಗಳಾಗಿರ ಬೇಕು. ಕನಿಷ್ಟ 50 ವರ್ಷ ವಯಸ್ಸುಳ್ಳವರಾಗಿರಬೇಕು, ಸಾರ್ವಜನಿಕ ಸೇವೆಯಲ್ಲಿ ಸತತವಾಗಿ ತೊಡಗಿರಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ ತಿಳಿದಿದ್ದಾರೆ.