ಮಡಿಕೇರಿ, ಮಾ. 5 : ಕೊಡಗು ಮೂಲದ ಹಾಕಿ ಆಟಗಾರ ಎಸ್.ವಿ.ಸುನಿಲ್ ಮಂಗಳೂರಿನ ಕುವರಿ ನಿಷಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನಿನ್ನೆ ದಿನ ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ದಲ್ಲಿ ವಿವಾಹ ನಡೆದಿದ್ದು,ಇಂದು ನಗರದ ಕಾವೇರಿ ಹಾಲ್‍ನಲ್ಲಿ ಆರತಕ್ಷತೆ ನೆರವೇರಿತು.
ಮಂಗಳೂರಿನ ತಾರನಾಥ್ ಆಚಾರ್ಯ ಹಾಗೂ ಸುನಿತಾ ದಂಪತಿಯ ಪುತ್ರಿಯಾಗಿರುವ ನಿಷಾ ಮಂಗಳೂರಿನ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜ್ಯುಕೇಷನ್ ವಿಭಾಗದಲ್ಲಿ ಅಕೌಂಟಿಂಗ್ ಸಾಫ್ಟ್‍ವೇರ್ ತರಬೇತಿ ನೀಡುವ ವೃತ್ತಿ ನಿರ್ವಹಿಸುತ್ತಿದ್ದಾರೆ.. ಮಡಿಕೇರಿಯ ದಿ.ವಿಠಲಾಚಾರ್ಯ ಶಾಂತ ದಂಪತಿಯ ಪುತ್ರನಾಗಿರುವ ಸುನಿಲ್ ಭಾರತ ಹಾಕಿ ತಂಡದಲ್ಲಿ ಕಳೆದ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ..
ಆರತಕ್ಷತೆ ಸಮಾರಂಭಕ್ಕೆ ಭಾರತ ಹಾಕಿ ತಂಡದ ಆಟಗಾರರಾದ ಶ್ರೀಜೇಶ್, ರೂಪೀಂದರ್ ಪಾಲ್, ಹರ್ಮನ್‍ಪ್ರೀತ್ ,ಬಿರೇಂದ್ರ ಲಾಕ್ರಾ, ಮನ್‍ಪ್ರಿತ್ ಸಿಂಗ್, ಮಂದೀಪ್ ಸಿಂಗ್, ಸದ್ಬೀರ್ ಸಿಂಗ್,
(ಮೊದಲ ಪುಟದಿಂದ) ಆಕಾಶ್ ದೀಪ್, ಸುಮಿತ್, ರಘುನಾಥ್, ವಿ.ಎಸ್. ವಿನಯ್, ಹರಿಪ್ರಸಾದ್, ವಿಕ್ರಂಕಾತ್, ಕೋಚ್‍ಗಳಾದ ಕ್ರಿಸ್ ಸಿರೆಲೋ, ಭರತ್ ಚೆಟ್ರಿ ಭಾಗಿಯಾಗಿದ್ದರು.