ಕೂಡಿಗೆ, ಮಾ. 5 : ಸೈನಿಕ ಶಾಲಾ ವಿದ್ಯಾರ್ಥಿ ಕೆಡೆಟ್ ಅನುಷ್ ಆಂಟೋನಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರೇರಣಾ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯವು ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ದಾವಣಗೆರೆಯ ಜೈನ್ ವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು.
ಈ ಸ್ಪರ್ಧೆಗೆ ಸೈನಿಕ ಶಾಲೆ ವಿದ್ಯಾರ್ಥಿ ಅನುಷ್ ಆಂಟೋನಿ ತಮ್ಮ ಕ್ವಾಡ್ ಕಾಪ್ಟರ್(ದ್ರೋಣ್ ಯಂತ್ರ)ದ ಮಾದರಿಯೊಂದಿಗೆ ಸ್ಪರ್ಧೆಯಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದರು. ಇವರು ಪ್ರದರ್ಶಿಸಿದ ಕ್ವಾಡ್ ಕಾಪ್ಟರ್ (ದ್ರೋಣ್ ಯಂತ್ರ) ಮಾದರಿಯು ವಿಜ್ಞಾನದ ಒಟ್ಟು 5 ಅತ್ಯುತ್ತಮ ಮಾದರಿಗಳಲ್ಲೊಂದಾಗಿತ್ತು.