ಶನಿವಾರಸಂತೆ, ಮಾ. 5: ಗುಡುಗಳಲೆ ಬದ್ರಿಯಾ ಜುಮಾ ಮಸೀದಿ ವತಿಯಿಂದ ಹಝ್ರತ್ ಫಖೀರ್ ಷಾಹ್ ವಲಿಯುಲ್ಲಾಹಿ (ಐ.ಸಿ.) ಉರೂಸ್ ತಾ. 8, 9 10 ಹಾಗೂ 11 ರಂದು ನಾಲ್ಕು ದಿನ ಮಸೀದಿ ಸಭಾಂಗಣದಲ್ಲಿ ನಡೆಯಲಿದೆ.

ತಾ. 8 ರಂದು ರಾತ್ರಿ 8 ಗಂಟೆಗೆ ಕಾಜೂರಿನ ಬಹು ಅಸ್ಸಯ್ಯಿದ್ ಕೆ.ಪಿ.ಎಸ್. ಜಮಲುಲ್ಲೈ ತಙÐಳ್ ನೇತೃತ್ವದಲ್ಲಿ ಸ್ತ್ರೀಯರ ನಮಾಜ್ ಕೊಠಡಿ ಉದ್ಘಾಟನೆ ಹಾಗೂ ಸ್ವಲಾತ್ ಮಸ್ಲಿಸ್ ನಡೆಯಲಿದೆ. ಕಾರ್ಯಕ್ರಮವನ್ನು ಬದ್ರಿಯಾ ಜುಮಾ ಮಸೀದಿ ಖತೀಬ್ ಮುಹಮ್ಮದ್ ಸುಹೈಬ್ ಫೈಝಿ ಉದ್ಘಾಟಿಸುತ್ತಾರೆ. ಮಸೀದಿ ಅಧ್ಯಕ್ಷ ಜನಾಬ್ ಹಸೈನಾರ್ ಉಸ್ತಾದ್ ಅಧ್ಯಕ್ಷತೆ ವಹಿಸುತ್ತಾರೆ.

ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಅಬ್ದುಲ್ ರಝಾಕ್, ಹಂಸ ಮಿಸ್ ಬಾಹಿ, ಅಬೂಬಕರ್ ಸಿದ್ದೀಕ್, ಮುಸ್ತಾಫ ಸಖಾಫಿ, ಯಹಕೂಬ್, ಆಗಂ, ಉಮರ್, ಹಸೈನಾರ್ ಕಾಜೂರ್, ಅಬ್ದುಲ್ ರಹಮಾನ್ ಭಾಗವಹಿಸುವರು.

ತಾ. 9 ರಂದು ರಾತ್ರಿ 8 ಗಂಟೆಗೆ ಕಣ್ಣೂರಿನ ಇಂಟಿ ಜುಮಾ ಮಸೀದಿಯ ಖತೀಬ್ ಉಸ್ತಾದ್ ರಿಯಾಜ್ ಹುದವಿ ಅವರಿಂದ ‘ದುನಿಯಾವ್ ಉರಜ್ಜುನ್ನವಂಡೆ ಸ್ವಪ್ನಂ’ ವಿಷಯದ ಬಗ್ಗೆ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ತಾ. 10 ರಂದು ರಾತ್ರಿ 8 ಗಂಟೆಗೆ ಕೇರಳದ ಕುನ್ನಂಗೈ ಅಸ್ಸಯ್ಯಿದ್ ಶರಫುದ್ದೀನ್ ತಙÐಳ್ ಅಲ್ ಹಾದಿ ರಬ್ಬಾನಿ ನೇತೃತ್ವದಲ್ಲಿ ಖತ್‍ಮುಲ್ ಖುರ್ ಆನ್ ದುಆ ನಡೆಯಲಿದೆ.

ಕಾರ್ಯಕ್ರಮವನ್ನು ಬದ್ರಿಯಾ ಜುಮಾ ಮಸೀದಿ ಖತೀಬ ಶುಹೈಬ್ ಫೈಝಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಉಮರ್ ಫೈಝಿ, ಶಾಫಿ ಸಅದಿ, ಮಹಮ್ಮದ್ ಫೈಝಿ, ಡಿ. ಸುಲೇಮಾನ್, ಸೈದಾಲಿ, ಹಜ್ರತ್, ಅಕ್ಮಲ್ ಪಾಶ, ಸಯ್ಯದ್ ಅಹಮ್ಮದ್, ಅಬ್ದುಲ್ ರಝಾಕ್, ಹಂಸ ಮುಸ್ಲಿಯಾರ್ ಪಾಲ್ಗೊಳ್ಳುತ್ತಾರೆ.

ತಾ. 11 ರಂದು ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಉರೂಸ್ ನೇರ್ಚೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಮೌಲಿದ್ ಪಾರಾಯಣ ಹಾಗೂ 12.30 ರಿಂದ ಸಂಜೆ 3ರ ವರೆಗೆ ಅನ್ನದಾನ ನಡೆಯಲಿದೆ ಎಂದು ಬದ್ರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.