ವೀರಾಜಪೇಟೆ, ಮಾ. 2: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ಅಯ್ಯಪ್ಪ ಭಗವತಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಸುವ ಮಳೆ ಪೂಜೆ ತಾ. 3 ರಂದು (ಇಂದು) ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಅಮ್ಮಣಕುಟ್ಟಂಡ ಬೋಪಣ್ಣ ತಿಳಿಸಿದ್ದಾರೆ.
ತಾ. 5 ರಿಂದ 7ರವರೆಗೆ ಅಯ್ಯಪ್ಪ ದೇವರ ಪುನರ್ ಪ್ರತಿಷ್ಠಾಪನೆಯ ಪೂಜಾ ಕಾರ್ಯಗಳು ನಡೆಯಲಿದ್ದು ಇದೇ ಅವಧಿಯಲ್ಲಿ ವಿಶೇಷ ಮಹಾಸಭೆಯನ್ನು ನಡೆಸಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬೋಪಣ್ಣ ತಿಳಿಸಿದ್ದಾರೆ.