ಕುಶಾಲನಗರ, ಫೆ 28: ಕುಶಾಲನಗರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಬ್ರಾಹ್ಮಣ ಕ್ಷೇಮಾಭಿವೃದ್ಧಿ ಕಚೇರಿಯಲ್ಲಿ ಅಧ್ಯಕ್ಷ ಪಿ.ಎನ್. ವಿಜಯೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಖಜಾಂಚಿ ಕೆ.ಎಸ್. ರಾಜಶೇಖರ್, ಸಹ ಕಾರ್ಯದರ್ಶಿ ವಿ.ಹೆಚ್. ಕುಲಕರ್ಣಿ, ನಿರ್ದೇಶಕರಾದ ಬಿ.ಆರ್. ರಾಜೀವ, ಮೋಕ್ಷಲಕ್ಷ್ಮೀ ನಾರಾಯಣ, ಬಿ.ಜಿ. ಮಂಜುನಾಥ್, ಕಾನೂನು ಸಲಹೆಗಾರ ಕೆ.ಎಸ್. ವೆಂಕಟರಮಣ, ವಿಶೇಷ ಆಹ್ವಾನಿತರಾದ ಎಂ.ವಿ. ನಾರಾಯಣ ಇದ್ದರು.

ಸುಂಟಿಕೊಪ್ಪದ ಶ್ರೀರಾಮ ದೇವಾಲಯದ ಅರ್ಚಕ ಭಾ.ಮಾ. ಗಣೇಶ್ ಶರ್ಮಾ ಮತ್ತು ಕುಶಾಲನಗರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿ.ಜಿ. ಮಂಜುನಾಥ್ ಅವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು. ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.