ಮಡಿಕೇರಿ, ಫೆ. 28: ಸಮುದಾಯ ಸೇವೆಗಾಗಿ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ನೆಹರು ಕೇಂದ್ರವು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ರಾಷ್ಟ್ರೀಯ ಯುವದಳ ಸೇವಾ ಕಾರ್ಯಕರ್ತರಾಗಿ ಒಂದು ವರ್ಷದ ಅವಧಿಗೆ ಸೇವೆ ಸಲ್ಲಿಸಲು ಅರ್ಹ ಯುವಜನರಿಂದ ಅರ್ಜಿ ಆಹ್ವಾನಿಸಿದೆ.
18 ರಿಂದ 29 ವರ್ಷದೊಳಗಿರುವ ಹತ್ತನೇ ತರಗತಿಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಿರುವ ಯುವಜನರು ಹಾಗೂ ಸಂಘ, ಮಂಡಳಿಯ ಸದಸ್ಯರು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ ರೂ 5 ಸಾವಿರವನ್ನು ಗೌರವಧನವಾಗಿ ನೀಡಲಾಗುವದು. ಪದವಿಪೂರ್ವ ಮತ್ತು ಪದವೀಧರ ಮಹಿಳೆಯರಿಗೂ ಆದ್ಯತೆ ನೀಡಲಾಗುವದು ಎಂದು ಅವರು ತಿಳಿಸಿದ್ದಾರೆ. ಅರ್ಜಿ ಸಲ್ಲಿಸುವವರು ನಿಗದಿತ ಅರ್ಜಿ ನಮೂನೆಯನ್ನು ನೆಹರು ಯುವ ಕೇಂದ್ರದ ವೆಬ್‍ಸೈಟ್ ತಿತಿತಿ.ಟಿಥಿಞs.oಡಿg ನಿಂದ ಪಡೆದು ತಾ. 13 ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನೆಹರು ಯುವ ಕೇಂದ್ರ, ಜಿಲ್ಲಾ ಯುವಜನ ಸಮನ್ವಯಧಿಕಾರಿ ಸಿ.ಎನ್. ಯಶ್ವಂತ್ ಯಶು ನಿಲಯ ಬ್ಲಾಕ್ ನಂ. 08, ಕಾವೇರಿ ಲೇಔಟ್, ಮಡಿಕೇರಿ (08272-225470) ಇವರನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರ ಜಿಲ್ಲಾ ಯುವಜನ ಸಮನ್ವಯಧಿಕಾರಿ ತಿಳಿಸಿದ್ದಾರೆ.