ಕುಶಾಲನಗರ, ಫೆ. 28: ಮಾದಾಪಟ್ಟಣ ಶನೇಶ್ವರ ದೇವಸ್ಥಾನದ 9ನೇ ವರ್ಷದ ವಾರ್ಷಿಕ ಉತ್ಸವ ನಡೆಯಿತು. ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಾಲಯದಲ್ಲಿ ಹೋಮ, ಅಗ್ನಿಕುಂಡ ಸ್ಥಾಪನೆ, ಕಲಶಾಭಿಷೇಕ, ಪೂಜಾ ವಿಧಿವಿಧಾನಗಳು ಜರುಗಿದವು.
ಸಂಜೆ ಅಲಂಕೃತ ವಾಹನದಲ್ಲಿ ಶನೇಶ್ವರ ದೇವರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಕುಶಾಲನಗರ ತನಕ ಮೆರವಣಿಗೆ ನಡೆಸಲಾಯಿತು. ದೇವಾಲಯ ಸಮಿತಿಯ ಪ್ರಮುಖರಾದ ಉಮೇಶ್, ಸುರೇಶ್, ಪೊನ್ನಪ್ಪ ಮತ್ತಿತರರು ಇದ್ದರು. ಸುತ್ತಮುತ್ತಲ ಭಕ್ತಾದಿಗಳು ಪಾಲ್ಗೊಂಡಿದ್ದರು.