ಮಡಿಕೇರಿ, ಫೆ. 28: ಕೊಡಗು ಪ್ರೆಸ್ ಕ್ಲಬ್‍ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಪ್ರಭ ಸಿದ್ದಾಪುರ ವರದಿಗಾರ ಆರ್. ಸುಬ್ರಮಣಿ, ಉಪಾಧ್ಯಕ್ಷರಾಗಿ ಕನ್ನಡಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್ ಭೂತನಕಾಡು, ಜಂಟಿ ಕಾರ್ಯದರ್ಶಿಯಾಗಿ ‘ಶಕ್ತಿ’ ಕೂಡಿಗೆ ವರದಿಗಾರ ಕೆ.ಕೆ. ನಾಗರಾಜ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆ.ಬಿ. ಮಂಜುನಾಥ್ ರಾಜೀನಾಮೆ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.