ಕೂಡಿಗೆ, ಫೆ. 28: ಗುಡ್ಡೆಹೊಸೂರು ಡೈರಿ ಮುಂಭಾಗದಲ್ಲಿ ಮಂಗಳವಾರ ಬೆಳಿಗ್ಗೆ ನರ್ಸರಿ ಮಾಲೀಕರೊಬ್ಬರು ಅತ್ತೂರು ನಿವಾಸಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮಾದಾಪಟ್ಟಣ ನಿವಾಸಿ ನರ್ಸರಿ ಮಾಲೀಕ ಮಿಲನ್ ಎಂಬವರು ಬೊಳ್ಳೂರು ಗ್ರಾಮದ ಪುಲಿಯಂಡ ಎಸ್. ಲವನಂಜಪ್ಪ ಎಂಬವರ ಮೇಲೆ ಕತ್ತಿಯಿಂದ ಕಡಿದಿದ್ದು, ಹಣೆ ಭಾಗಕ್ಕೆ ತೀವ್ರವಾದ ಗಾಯಗಳಾಗಿವೆ.
ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವಿಷಯಕ್ಕೆ ಮಿಲನ್ ಕೂಡಾ ತಮಗೂ ಪೆಟ್ಟಾಗಿದೆ ಎಂದು ಕುಶಾಲನಗರ ಪೊಲೀಸ್ ಠಾಣೆಗೆ ಲವನಂಜಪ್ಪ ವಿರುದ್ಧ ದೂರು ನೀಡಿ, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ದವೂ ಪ್ರತ್ಯೇಕ ದೂರುಗಳು ದಾಖಲಾಗಿವೆ.