ಮಡಿಕೇರಿ ಫೆ.28 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ. 2 ರಂದು (ನಾಳೆ) “ಕವನ ಕುಂಚ ಕಾರ್ಯಕ್ರಮ-2018” ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷರಾದ ಪಿ.ಸಿ.ಜಯರಾಮ್ ನಗರದ ಕೊಡಗು ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯ ಕ್ರಮದ ಕುರಿತು ಮಾಹಿತಿ ನೀಡಿದರು. ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಉದ್ಘಾಟಿಸಲಿದ್ದಾರೆ.
ಕಳೆದ ಮೂರು ವರ್ಷಗಳ ಕಾಲ ಅಕಾಡೆಮಿ ಮಾಡಿದ ಸಾಧನೆಯ ಮಾಹಿತಿ ಇರುವ “ಸಫಲ” ಪುಸ್ತಕವನ್ನು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕೊಡಗು ಜಿ. ಪಂ. ಅಧ್ಯಕ್ಷ ಬಿ.ಎ. ಹರೀಶ್, ಗೌರವ ಉಪಸ್ಥಿತಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಮಂಗಳೂರಿನ ಸಂತ ಅಲೋಸಿಯಸ್ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ವಿಶ್ವನಾಥ ಬದಿಕಾನ ಅವರು ಮುಖ್ಯ ಭಾಷಣ ಮಾಡಲಿದ್ದು, ಕವಿಗಳಾದ ಡಾ. ಕರುಣಾಕರ ನಿಡಿಂಜಿ, ಶಿವದೇವಿ ಅವನಿಶ್ಚಂದ್ರ, ಕುಲ್ಲಚನ ಕಾರ್ಯಪ್ಪ, ಎಸ್.ಕೆ.ಈಶ್ವರಿ, ತೆಕ್ಕಡೆ ಕುಮಾರಸ್ವಾಮಿ, ಗೀತಾ ಪದ್ಮನಾಭ, ಮಾಧವ ಚೆಂಬು, ಬಾರಿಕೆ ಶೈಲಜಾ ಭಾಗವಹಿಸಲಿದ್ದಾರೆ.
ಚಿತ್ರಕಲಾವಿದರಾಗಿ ಕೋಡಿ ಭರತ್ ಹಾಗೂ ಕೌಶಿಕ್ ಮೂಡಗದ್ದೆ ಪಾಲ್ಗೊಳ್ಳಲಿದ್ದು, ಸಭಾ ಕಾರ್ಯಕ್ರಮದ ನಂತರ ಲಿಟ್ಲ್ ಪ್ಲವರ್ ವಿದ್ಯಾಸಂಸ್ಥೆ ಹಾಗೂ ವಿನೋದ್ ಮೂಡಗದ್ದೆ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪಿ.ಸಿ.ಜಯರಾಮ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕರಾದ ಬಾರಿಯಂಡ ಜೋಯಪ್ಪ, ಸದಸ್ಯರುಗಳಾದ ಕಾನೆಹಿತ್ಲು ಮೊಣ್ಣಪ್ಪ, ಕಡ್ಲೇರ ತುಳಸಿ ಮೋಹನ್ ಹಾಗೂ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಉಪಸ್ಥಿತರಿದ್ದರು.