ಮಡಿಕೇರಿ ಫೆ.28 : ಹಳೆಯ ಮನೆಗಳ ನವೀಕರಣ, ಪುನರ್ ನಿರ್ಮಾಣ ಕಾರ್ಯಕ್ಕೆ ‘ಸಿಂಗಲ್ ಲೇ ಔಟ್ ಭೂ ಪರಿವರ್ತನೆ’ ಕಡ್ಡಾಯ ಗೊಳಿಸಿರುವ ಕ್ರಮವನ್ನು ಮತ್ತು ನಗರಸಭೆಯ ಆಡಳಿತ ಧೋರಣೆ ಗಳನ್ನು ಖಂಡಿಸಿ ನಗರ ಜಾತ್ಯತೀತ ಜನತಾದಳದಿಂದ ಮಾ. 2 ರಂದು (ನಾಳೆ) ಬೃಹತ್ ಪ್ರತಿಭಟನೆ ನಡೆಸಲಾಗುವದೆಂದು ನಗರ ಜೆಡಿಎಸ್ ಅಧ್ಯಕ್ಷ ಬಿ.ವೈ.ರಾಜೇಶ್ ಯಲ್ಲಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಸಮಾವೇಶಗೊಂಡು ನಗರದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಿ ದ್ದಾರೆ, ನಂತರ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಗುವದೆಂದು ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರದ ಆದೇಶದಂತೆ ಮಡಿಕೇರಿ ನಗರವ್ಯಾಪ್ತಿಯಲ್ಲಿ ಹಲವಾರು ದಶಕಗಳಿಂದ ನೆಲೆಸಿರುವವರು ತಮ್ಮ ಮನೆಗಳನ್ನು ದುರಸ್ತಿ ಇಲ್ಲವೆ ಪುನರ್ ನಿರ್ಮಾಣ ಮಾಡಲು ಭೂ ಪರಿವರ್ತನೆ ಅವಶ್ಯ. ಈ ಹಿನ್ನೆಲೆಯಲ್ಲಿ ಮೂಡಾವನ್ನು ಸಂಪರ್ಕಿಸಿದಲ್ಲಿ, ಜಿಲ್ಲಾಧಿಕಾರಿಗಳ ಮೂಲಕ ಸಿಂಗಲ್ ಲೇ ಔಟ್ ಭೂ ಪರಿವರ್ತನೆ ಮಾಡುವದು ಕಡ್ಡಾಯವೆಂದು ಹೇಳುತ್ತಿರುವದು ಸಾಕಷ್ಟು ಮಂದಿಗೆ ಸಂಕಷ್ಟವನ್ನು ತಂದೊಡ್ಡಿದೆ. ಈಗಾಗಲೆ ಈ ಎಲ್ಲಾ ಮನೆಗಳ ಜಾಗ ‘ಮನೆ ದಳ’ವೆಂದು ದಾಖಲೆಗಳಲ್ಲಿ ಗುರುತಿಸಿರುವದರಿಂದ ಜಿಲ್ಲಾಧಿಕಾರಿ ಗಳ ಮೂಲಕವೂ ಭೂಪರಿವರ್ತನೆ ಅಸಾಧ್ಯವಾಗಿದೆಯೆಂದು ಸಮಸ್ಯೆಯ ಗಂಭೀರತೆಯ ಬಗ್ಗೆ ರಾಜೇಶ್ ವಿವರಿಸಿದರು.
ಮಡಿಕೇರಿ ನಗರಸಭೆÉಯ ಆಡಳಿತ ವೈಫಲ್ಯತೆಗಳಿಂದ ನಗರವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿಗಳು ನಡೆಯುತ್ತಿವೆ. ಹೀಗಿದ್ದೂ ನಗರಸಭೆÉಯ ಸಾಮಾನ್ಯ ಸಭೆಗಳಲ್ಲಿ ಅಭಿವೃದ್ಧಿಯ ಕುರಿತ ಚರ್ಚೆಗಳು ನಡೆಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಈ ವಿಚಾರದ ಬಗ್ಗೆಯೂ ಪ್ರತಿಭಟನೆ ಸಂದರ್ಭ ಪ್ರಸ್ತಾಪಿಸಲಾಗುವದು ಎಂದು ರಾಜೇಶ್ ಹೇಳಿದರು.
ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೆÉೀಶ್ ಮಾತನಾಡಿ, 1976ರ ಬಳಿಕ ನಗರವ್ಯಾಪ್ತಿಯಲ್ಲಿ ಯಾರೆಲ್ಲ ಮನೆ ಕಟ್ಟಿ, ಅದನ್ನು ಪ್ರಸ್ತುತ ದುರಸ್ತಿ ಇಲ್ಲವೆ, ಪುನರ್ ನಿರ್ಮಾಣಕ್ಕೆ ಮುಂದಾಗಿದ್ದಲ್ಲಿ ಅವರೆಲ್ಲರಿಗೂ ಸಿಂಗಲ್ ಲೇ ಜೌಟ್‍ನಂತೆ ಭೂ ಪರಿವರ್ತನೆ ಕಡ್ಡಾಯಗೊಳಿಸಿರುವದು ತೊಂದರೆಯನ್ನು ಉಂಟು ಮಾಡಿದೆ. ಹಿಂದಿನಿಂದಲೂ ನಗರಸಭೆÉಗೆ ನೀರಿನ ಕರ, ತೆರಿಗೆಯನ್ನು ಪಾವತಿಸಿಕೊಂಡು ಬಂದಿದ್ದರು ಇದೀಗ ಸಮಸ್ಯೆ ಸೃಷ್ಟಿಯಾಗಿದೆ ಎಂದರು.
ಕಾಲೆÉೀಜು ರಸ್ತೆಯಲ್ಲಿ ವಾರಿಸುದಾರರಿಲ್ಲದ ಕಟ್ಟಡಕ್ಕೆ ನಕಲಿ ದಾಖಲೆ ಸೃಷ್ಟಿಸಿದ್ದಾರೆನ್ನುವ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಕೆ.ಎಂ. ಗಣೇಶ್, ಸುಳ್ಳನ್ನು ತಲೆಯ ಮೇಲೆ ಹೊಡೆದಂತೆ ಹೇಳುವದು ಬಿಜೆಪಿ ಸಿದ್ಧಾಂತ, ತನ್ನ ಮೇಲಿನ ಆರೋಪವನ್ನು ದಾಖಲೆ ಸಹಿತ ಸಾಬೀತು ಪಡಿಸಿದರೆ ತಾನು ಅವರ ಕಾಲ ಕೆಳಗೆ ಕೂರುವದಾಗಿ ಸವಾಲೊಡ್ಡಿದರು.
ಕಚೇರಿ ಉದ್ಘಾಟನೆ : ನಗರದ ಚಿಕ್ ಕಾಂಪ್ಲೆಕ್ಸ್‍ನಲ್ಲಿ ಮಾ.2 ರಂದು ಜೆಡಿಎಸ್ ಪಕ್ಷದ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಲಾಗುತ್ತದೆ. ಕಾರ್ಯಕ್ರಮ ದಲ್ಲಿ ಪಕ್ಷದ ನಾಯಕ ಬಿ.ಎ. ಜೀವಿಜಯ, ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯೆ ಲೀಲಾ ಶೇಷಮ್ಮ, ಯುವ ಜೆಡಿಎಸ್ ಅಧ್ಯಕ್ಷ ರವಿ ಕಿರಣ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಕೊರಗಪ್ಪ ರೈ, ಹಾಗೂ ಜಿಲ್ಲಾ ಸಂಘÀಟನಾ ಕಾರ್ಯದರ್ಶಿ ಗಣೇಶ್ ಉಪಸ್ಥಿತರಿದ್ದರು.